ಮಡಿಕೇರಿ, ಜು. 31: ಕೊಡಗು ಪ್ರೆಸ್ ಕ್ಲಬ್ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಬರಪೊಳೆಯಲ್ಲಿ ರಿವರ್ ರಾಫ್ಟಿಂಗ್ ಏರ್ಪಡಿಸಲಾಗಿತ್ತು.
ದಕ್ಷಿಣ ಕೊಡಗಿನ ಟಿ ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ಬರಪೊಳೆ ನದಿಯಲ್ಲಿ ಪತ್ರಕರ್ತರಿಗೆ ರಿವರ್ ರಾಫ್ಟಿಂಗ್ ಏರ್ಪಡಿಸಿದ್ದು, ಜಿಲ್ಲೆಯ ಸುಮಾರು 49 ಪತ್ರಕರ್ತರು ರಾಫ್ಟಿಂಗ್‍ನಲ್ಲಿ ಪಾಲ್ಗೊಂಡರು.
ಈ ಸಂದರ್ಭ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಕಳ್ಳೇಂಗಡ ಬಾಲಕೃಷ್ಣ, ಸಮಾಜ ಸೇವಕರಾದ ಅಪ್ಪಚ್ಚಂಗಡ ಮೋಟಯ್ಯ, ಕೂರ್ಗ್ ವೈಟ್ ವಾಟರ್ ರಾಫ್ಟಿಂಗ್‍ನ ಮಾಲೀಕರಾದ ಬೋಸ್ ಮಾದಪ್ಪ, ಮಾಣಿರ ಪವನ್, ಐಸ್ ಪೆಡಲ್ಸ್ ರಾಫ್ಟಿಂಗ್ ಮಾಲೀಕರಾದ ಮಂಜುನಾಥ್, ಸೌಮ್ಯ, ಕೊಡಗು ವೈಟ್ ವಾಟರ್ ರಾಫ್ಟಿಂಗ್‍ನ ಮಾಲೀಕರಾದ ಪೆಮ್ಮಡಮಾಡ ನಿತಿನ್, ಚೋನಿರ ರತನ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ, ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿ ಪ್ರಧಾನ ಸುಬ್ರಮಣಿ, ಖಜಾಂಚಿ ರೆಜಿತ್ ಕುಮಾರ್ ಗುಹ್ಯ, ತಾಲೂಕು ಸಂಘದ ಸಹ ಕಾರ್ಯದರ್ಶಿ ಕಿಶೋರ್ ನಾಚಪ್ಪ, ನಿರ್ದೇಶಕ ಡಿ. ನಾಗೇಶ್ ಸೇರಿದಂತೆ ಇನ್ನಿತರರು ಇದ್ದರು.