ಮಡಿಕೇರಿ, ಜು. 28: ಜಿಲ್ಲೆಯಲ್ಲಿ ದೌರ್ಜನ್ಯಕೊಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ ಮತ್ತು ಮಹಿಳಾ ಸಹಾಯವಾಣಿ ಸಹಾಯವಾಣಿ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ “ಸಖಿ: ಒನ್ ಸ್ಟಾಪ್ ಸೆಂಟರ್’ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋದಕ ಆಸ್ಪತ್ರೆಯಲ್ಲಿ ಗೌರವಧನದ ಆಧಾರದ ಮೇಲೆ ಮಹಿಳಾ ಕೇಂದ್ರ ಆಡಳಿತಾಧಿಕಾರಿ-1, ಮಹಿಳಾ ಆಪ್ತ ಸಮಾಲೋಚಕರು-1, ಮಹಿಳಾ ಸಮಾಜ ಸೇವಾ ಕಾರ್ಯಕರ್ತರು-4, ಮಹಿಳಾ ವಕೀಲರು-1, ಮಹಿಳಾ ಡಾಟಾ ಎಂಟ್ರಿ ಆಪರೇಟರ್‍ಗಳು-2, ಮಹಿಳಾ ರಕ್ಷಕರು-3, ಮಹಿಳಾ ಸ್ವಚ್ಛತಾಗಾರರು-2 ಸಿಬ್ಬಂದಿಯವರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಮಹಿಳಾ ಕೇಂದ್ರ ಆಡಳಿತಾಧಿಕಾರಿ ಹುದ್ದೆಗೆ ಎಂಬಿಎ(ಪೈನಾನ್ಸ್) ಜೊತೆಗೆ ಕಂಪ್ಯೂಟರ್ ಜ್ಞಾನ ಹಾಗೂ 1 ವರ್ಷದ ಅನುಭವ, ಮಹಿಳಾ ಆಪ್ತ ಸಮಾಲೋಚಕರಿಗೆ ಎಂಎಸ್‍ಡಬ್ಲ್ಯೂ, ಮೆಡಿಕಲ್, ಎಂಎ, ಸೈಕಾಲಜಿ, ಸೋಷಿಯಾಲಾಜಿ, ಎಂಎಸ್ಸಿ ಕೌನ್ಸಿಲಿಂಗ್ ಮತ್ತು ಸೈಕೋಥೆರಫಿ ಜೊತೆಗೆ ಒಂದು ವರ್ಷದ ಅನುಭವ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಸಿದ್ದರಿರಬೇಕು. ಮಹಿಳಾ ಸಮಾಜ ಸೇವಾ ಕಾರ್ಯಕರ್ತರು ಹುದ್ದೆಗೆ ಬಿಎಸ್‍ಡಬ್ಲ್ಯೂ, ಬಿ.ಎ ಸೈಕಾಲಜಿ ಜೊತೆಗೆ ಕಂಪ್ಯೂಟರ್ ಜ್ಞಾನ, ಒಂದು ವರ್ಷದ ಅನುಭವ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಸಿದ್ದರಿರಬೇಕು. ಮಹಿಳಾ ವಕೀಲರು ಎಲ್‍ಎಲ್‍ಬಿ ಜೊತೆಗೆ ಒಂದು ವರ್ಷದ ಅನುಭವ, ಮಹಿಳಾ ಡಾಟಾ ಎಂಟ್ರಿ ಆಪರೇಟರ್‍ಗಳು ಯಾವದಾದರೂ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ(ನುಡಿ ತಂತ್ರಾಂಶದಲ್ಲಿ ಪರಿಣಿತಿ) ಹಾಗೂ ಒಂದು ವರ್ಷದ ಅನುಭವ, ಮಹಿಳಾ ರಕ್ಷಕರು ಹತ್ತನೇ ತರಗತಿ ತೇರ್ಗಡೆ ಹಾಗೂ ರಾತ್ರಿ ಪಾಳಿಯಲ್ಲಿ ಸರದಿ ಮೇಲೆ ಕೆಲಸ ನಿರ್ವಹಿಸಲು ಸಿದ್ದರಿರಬೇಕು. ಹಾಗೂ ಮಹಿಳಾ ಸ್ವಚ್ಛತಾಗಾರರು 5 ತರಗತಿ ಓದಿರಬೇಕು.

ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, 2020ರ ಮಾರ್ಚ್ 31 ಕ್ಕೆ ಕೊನೆಗೊಳ್ಳುತ್ತದೆ. ಒಂದು ರಕ್ಷಕರ ಹುದ್ದೆಯು ಟ್ರಾನ್ಸ್ ಜೆಂಡರ್ಸ್‍ರವರಿಗೆ ಮೀಸಲಾಗಿರುತ್ತದೆ. ಜಿಲ್ಲೆಯ ಸ್ಥಳೀಯ ಅಭ್ಯರ್ಥಿಗೆ ಮಾತ್ರ ಆದ್ಯತೆ. ಅಭ್ಯರ್ಥಿಗಳು ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಆಗಸ್ಟ್, 05 ರಂದು ಸಂಜೆ 5.30 ಗಂಟೆಯೊಳಗೆ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚೈನ್ ಗೇಟ್ ಬಳಿ, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ (ದೂ.08272-298379) ಕಚೇರಿಗೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.