ವೀರಾಜಪೇಟೆ, ಜು. 28: ನವಜ್ಯೊತಿ ಯುವಕ ಸಂಘದ ನೂತನ ಅಧ್ಯಕ್ಷರಾಗಿ ಎನ್. ರವಿ, ಕಾರ್ಯದರ್ಶಿಯಾಗಿ ಶ್ರೀಜಿತ್ ಕುಟ್ಟನ್ 2019-20ನೇ ಸಾಲಿಗೆ ಆಯ್ಕೆಯಾಗಿ ದ್ದಾರೆ. ವೀರಾಜಪೇಟೆ ನೆಹರು ನಗರದ ನವಜ್ಯೋತಿ ಯುವಕ ಸಂಘದ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು. 2019-20ನೇ ಸಾಲಿಗೆ ಚುನಾವಣೆ ನಡೆದು ಈ ಹಿಂದೆ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್. ರವಿ ಅವರು 2019-20ನೇ ಸಾಲಿಗೆ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಶ್ರೀಜಿತ್ ಕುಟ್ಟನ್ ಅವರನ್ನು ಆಯ್ಕೆಗೊಳಿಸಲಾಯಿತು. ಸಂಘವು ಹಲವಾರು ಜನಪರ ಕಾರ್ಯಕ್ರಮಗಳ ಹಮ್ಮಿಕೊಂಡು ಮುನ್ನಡೆದಿದೆ. ಮುಂದಿನ ಸಾಲಿನಲ್ಲಿಯೂ ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ನೀಡಿ ಸಂಘವನ್ನು ಮುನ್ನಡೆಸುವದಾಗಿ ನೂತನ ಅಧ್ಯಕ್ಷ ರವಿ ಹೇಳಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಮಣಿಕಂಠನ್ ಬಿ.ಜೆ, ಖಜಾಂಚಿಯಾಗಿ ಸುನಿಲ್ ಕೆ.ಎಸ್, ನಿರ್ದೇಶಕರುಗಳಾಗಿ ಅಗಸ್ಟೀನ್ ಕ್ಷೇವಿಯರ್, ಜ್ಯೂಡಿವಾಜ್, ಶಂಕರ್ ಪಿ, ಸುನೀಶ್ ಜಿ.ಎಸ್. ಕಿಶನ್, ಸೊಮಶೇಖರ್ ಡಿ.ಕೆ, ಜನಾರ್ಧನ್ ಮೂರ್ತಿ, ಪ್ರಕಾಶ್ ಕೆ.ಕೆ. ಮತ್ತು ದನೇಶ್ ಡಿ. ನಿಯುಕ್ತಿಗೊಂಡರು.