ಗುಡ್ಡೆಹೊಸೂರು, ಜು. 28: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಿ.ಜೆ.ಪಿ. ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್ ಮತ್ತು ವೀಕ್ಷಕರಾಗಿ ಕುಶಾಲಗರದ ಬಿ.ಜೆ.ಪಿ. ಮುಖಂಡ ನಾರಾಯಣ ಆಗಮಿಸಿದ್ದರು.

ಬಿ.ಜೆ.ಪಿ. ಮುಖಂಡ ಜಿ.ಎಂ. ಮಣಿಕುಮಾರ್ ಮತ್ತು ಬೂತ್ ಅಧ್ಯಕ್ಷರುಗಳಾದ ಕೆ.ಡಿ. ಗಿರೀಶ್, ಕೆ.ಆರ್. ನಿತ್ಯ, ಎಂ.ಆರ್. ಮಾದಪ್ಪ, ದೇವಪ್ಪ, ಮತ್ತು ತಾ.ಪಂ. ಸದಸ್ಯೆ ಪುಷ್ಪ, ಗ್ರಾ.ಪಂ. ಸದಸ್ಯರುಗಳಾದ ಕವಿತಾ, ಪುಷ್ಪ, ಡಾಟಿ, ಪಾರ್ವತಿ, ಜಿ.ಎಂ. ವಿಶುಕುಮಾರ್, ಬಾಲಕೃಷ್ಣ, ಎಂ.ಕೆ. ಮೋಹನ್, ಮಹೇಂದ್ರ, ಮುಂತಾದವರು ಹಾಜರಿದ್ದರು. ಸದಸ್ಯತ್ವ ಅಭಿಯಾನದ ಗುಡ್ಡೆಹೊಸೂರು ವಿಭಾಗದ ಸಂಚಾಲಕರಾಗಿ ಅಭಿಉಪ್ಪಾರ್ ಮತ್ತು ಸಹಸಂಚಾಲಕರಾಗಿ ಅಂಬಾಡಿರವಿ ಅವರನ್ನು ಆಯ್ಕೆ ಮಾಡಲಾಯಿತು. ಗಣೇಶ್ ಕುಡೆಕ್ಕಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.