ಮಡಿಕೇರಿ, ಜು. 28: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಪುರುಷರ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಕೊಡಗಿನ ಯುವಕ ಕಾಕೇರ ಪ್ರಜ್ವಲ್ ಮಂದಣ್ಣ ದಾಖಲೆ ನಿರ್ಮಿಸಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಯಾಗಿರುವ ಪ್ರಜ್ವಲ್ ಮಂದಣ್ಣ 10.3 ಸೆಕೆಂಡ್ಗಳಲ್ಲಿ ಗುರಿ ತಲಪುವ ಮೂಲಕ ಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಜ್ವಲ್ ಜಿಲ್ಲೆಯ ಪೊನ್ನಂಪೇಟೆ ಸನಿಹದ ಮತ್ತೂರಿನ ಕಾಕೇರ ರವಿ ಮತ್ತು ತಾರಾ ದಂಪತಿಯ ಪುತ್ರ.