ಮಡಿಕೇರಿ, ಜು. 28: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಡಿ. ಗಣೇಶ್ ಎಂಬವರ ಪತ್ನಿ ಪದ್ಮಾವತಿ (37) ಎಂಬವರು ಕಾಣೆಯಾಗಿರುವ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ತಾ. 22 ರಂದು ಆಸ್ಪತ್ರೆಗೆ ಹೋಗಿ ಬರುವದಾಗಿ ಮನೆಯಿಂದ ತೆರಳಿದಾಕೆ ಹಿಂತಿರುಗಿ ಬಂದಿಲ್ಲ ಎಂದು ಪುಕಾರಿನಲ್ಲಿ ದೂರಲಾಗಿದೆ.