ಮಡಿಕೇರಿ, ಜು. 28: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಗ್ರಾ.ಪಂ ನೌಕರರನ್ನು ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕಡೆಗಣಿಸಿದ್ದು, ಸಕಾಲದಲ್ಲಿ ವೇತನ ಪಾವತಿಯಾಗದೆ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೊಡಗು ಜಿಲ್ಲಾ ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಡ್ಡೆಹೊಸೂರಿನಲ್ಲಿ ನಡೆದ ಗ್ರಾ.ಪಂ ನೌಕರರ ಸಂಘದ ಸಮಾವೇಶ ಮತ್ತು ನೌಕರರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯಾವದೇ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಮಿಕ ಕಾಯ್ದೆಯಂತೆ ಕನಿಷ್ಟ ವೇತನ ಪಾವತಿಸುತ್ತಿಲ್ಲ. ಅಲ್ಪ ಪ್ರಮಾಣದ ವೇತನವನ್ನು ಕೂಡ ಸಕಾಲದಲ್ಲಿ ನೀಡದೆ ಸತಾಯಿಸಲಾಗು ತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಘಟಕದ ಸಭೆ ಆ.8 ರಂದು ಮಡಿಕೆÉೀರಿಯ ಬಾಲಭವನದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭ ತಿಳಿಸಿದರು. ರಾಜ್ಯ ಮುಖಂಡ ಲೋಕೇಶ್ ಮಾತನಾಡಿ ನೌಕರರು ತಮ್ಮ ಬದುಕಿನ ಭದ್ರತೆಗಾಗಿ ಬೀದಿಗಳಿದು ಹೋರಾಟ ನಡೆಸುವದು ಅನಿವಾರ್ಯವಾಗಿದೆ ಎಂದರು.

ರಾಜ್ಯ ಸಮಿತಿ ಸದಸ್ಯ ಟಿ.ಎಸ್. ದಿನೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್.ಜಿ. ನವೀನ್, ಬಿಸಿಯೂಟ ಸಂಘಟನೆಯ ಕಾವೇರಿ, ಅಂಗನವಾಡಿಯ ಜಮುನಾ, ಆಸ್ಪತ್ರೆ ನೌಕರರ ಸಂಘದ ಶಾರದಾ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ನೌಕರರುಗಳಾದ ಆರ್. ಕುಮಾರಸ್ವಾಮಿ, ಸುನಿತಾ, ಆರ್.ರವಿ ಹಾಗೂ ಸಿ.ಜಿ. ಮಮತಾ ಅವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.