ಮಡಿಕೇರಿ, ಜು. 28: ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಆಂತರಿಕ ವರ್ಗಾವಣೆ ಕೌನ್ಸಿಲಿಂಗ್ ತಾ. 30 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಘಟಕದ ಆಂತರಿಕ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದ ಕ್ರಮ ಸಂಖ್ಯೆ 01 ರಿಂದ 100ರವರೆಗೆ ಶಿಕ್ಷಕರು ಸೂಕ್ತ ಮೂಲ ದಾಖಲಾತಿಗಳೊಂದಿಗೆ ಕೌನ್ಸಿಲಿಂಗ್‍ಗೆ ಹಾಜರಾಗಬೇಕು.
ಶಿಕ್ಷಕರ ವರ್ಗಾವಣೆ ಆದ್ಯತಾ ಪಟ್ಟಿಯನ್ನು ಮೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರಕಟಣೆ ಫಲಕದಲ್ಲಿ ಪ್ರಕಟಿಸಲಾಗಿದ್ದು; ಅದರಲ್ಲಿ ಪರಿಶೀಲಿಸಿಕೊಳ್ಳಬಹುದು. ತಾ. 31 ರಂದು ಅರ್ಜಿ ಸಂಖ್ಯೆ 101 ರಿಂದ ಕೊನೆಯವರೆಗಿನ ಕೌನ್ಸಿಲಿಂಗ್ ನಡೆಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.