ಮಡಿಕೇರಿ, ಜು. 28: ಕೊಡಗು ಹೆಗ್ಗಡೆ ಆಡಳಿತ ಮಂಡಳಿ ಸಭೆ ಇಂದು ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಬೆಂಗಳೂರಿನಲ್ಲಿ ನಡೆದ ಸೀನಿಯರ್ ಅಥ್ಲೆಟಿಕ್ ಮೀಟ್ 2019 ರ 100 ಮಿ ಓಟದಲ್ಲಿ ಕಾಕೇರ ಪ್ರಜ್ವಲ್ ಮಾಡಿರುವ ಕ್ರೀಡಾಕೂಟದ ದಾಖಲೆಗೆ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು ಹೆಗ್ಗಡೆ ಸಮಾಜದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದ ಕೆಲಸ ಕಾರ್ಯ ಪ್ರಗತಿಯಲ್ಲಿದ್ದು ಒಂದು ತಿಂಗಳಲ್ಲಿ ಇದು ಸೇವೆಗೆ ಲಭ್ಯವಾಗಲಿದೆ. ಇದರಿಂದಾಗಿ ಸುತ್ತ ಮುತ್ತಲಿನ ಪರಿಸರ ಶುಚಿತ್ವ ಕಾಪಾಡಲು ದೊಡ್ಡ ಕೂಡುಗೆಯಾಗಲಿದೆ ಎಂದು ವಿವರ ನೀಡಲಾಯಿತು.

ಕೊಡವ ಹಬ್ಬ ಹರಿದಿನಗಳನ್ನು ಸಮಾಜದಲ್ಲಿ ವರ್ಷಂಪ್ರತಿಯಂತೆ ನಡೆಸಿಕೊಂಡು ಹೋಗಲು, ಕೊಡವ ಸಂಸ್ಕøತಿ, ಆಚಾರ-ವಿಚಾರಗಳಿಗೆ ಕನ್ನಡ ಸಂಸ್ಕøತಿ ಇಲಾಖೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ನೆರವಿ ನೊಂದಿಗೆ ಸಮಾಜ ಕೈಜೋಡಿಸು ವಂತೆ ನಿರ್ಣಯಿಸಲಾಯಿತು.

ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರಾಚಂಗಪ್ಪ ಸ್ವಾಗತಿಸಿ ವಂದಿಸಿದರು. ಕಾರ್ಯದರ್ಶಿ ಚಂಗಚಂಡ ಕಟ್ಟಿಕಾವೇರಪ್ಪ, ಕ್ರೀಡಾ ಮತ್ತು ಸಾಂಸ್ಕøತಿಕ ಸಮಿತಿ ಸಂಚಾಲಕ ಪಡಿಞರಂಡ ಪ್ರಭುಕುಮಾರ್, ಖಜಾಂಚಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರಾದ ಚರ್ಮಂಡ ಪೂವಯ್ಯ, ಪೊಕ್ಕಳಿಚಂಡ ಕಾಳಪ್ಪ, ಕೊಪ್ಪಡ ಪಳಂಗಪ್ಪ, ಪಂದಿಕಂಡ ಸುನಾ, ತಂಬಂಡ ಮಂಜುನಾಥ್, ಮೂರಿರ ಕುಶಾಲಪ್ಪ, ಮಲ್ಲಾಡ ಸುತಾ, ಚೋವಂಡ ಇಂದಿರಾ, ಮೂರಿರ ಶಾಂತಿ ಹಾಜರಿದ್ದರು.