ಗೋಣಿಕೊಪ್ಪ ವರದಿ, ಜು. 27: ‘ಕಾವೇರಿಗೆ ಬೇರಾಗೋಣ ಬನ್ನಿ’ ಎಂಬ ಸಂದೇಶದೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆದ ರೂಟ್ಸ್ ಆಫ್ ಕೊಡಗು ಅಭಿಯಾನದಲ್ಲಿ 700ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.ಸುಮಾರು 70ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡು ಗಿಡನೆಟ್ಟರು. ಅಭಿಯಾನ ದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಪರಿಸರ ಪ್ರೇಮಿಗಳಾಗಿ ಭಾಗವಹಿಸಿದರು.ಮೈಸೂರು-ಕೊಡಗು ಹೆದ್ದಾರಿಯ ಆನೆಚೌಕೂರು ಗಡಿಯಿಂದ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿನ ಮೂರು ಕಡೆಗಳಲ್ಲಿ ಕಾರ್ಯಕ್ರಮ ನಡೆಯಿತು. ಕಚೇರಿ, ಕಂಪ್ಯೂಟರ್, ಟ್ರಾಫಿಕ್ ಕಿರಿಕಿರಿ ನಡುವೆ ಇದ್ದವರು ಗಿಡ ನೆಡುವ ಮೂಲಕ ಸಂಭ್ರಮಿಸಿದರು. ಹೆಚ್ಚಾಗಿ ಯುವ ಸಮೂಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೊಡವಾಮೆ ಸಂಘಟನೆ ಮತ್ತು ಜಾವಾ ಎಜ್ಡಿ ಮೋಟಾರ್ಸೈಕಲ್ ಕ್ಲಬ್ ಸದಸ್ಯರುಗಳು, ಅರಣ್ಯ ಇಲಾಖೆ, ಕರ್ನಾಟಕ ಶಕ್ತಿ ಪಡೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಟಾಟಾ ಕಾಫಿ ಸೇರಿ ದಂತೆ 70 ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರುಗಳು ಪಾಲ್ಗೊಂಡರು. ಈ ಸಂದರ್ಭ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು ಬೆಂಗಳೂರಿನ ಸೇ ಟ್ರೀ ಆರ್ಗ ನೈಸೇಷನ್ ವತಿಯಿಂದ 50 ಸಾವಿರ ಬೀಜದುಂಡೆಗಳನ್ನು ನೀಡಲಾಗಿತ್ತು. ತಿತಿಮತಿ ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಗಳು ನೀಡಿರುವ 10 ಸಾವಿರ ಗಿಡಗಳನ್ನು ನೆಡಲಾಯಿತು.
ಮೂರು ವಿಭಾಗಳಲ್ಲಿ ಒಂದಷ್ಟು ಪ್ರದೇಶಗಳನ್ನು ಗುರುತಿಸಿಕೊಂಡು ತಂಡವಾಗಿ ವಿಂಗಡಣೆ ಮಾಡಿ ಕೊಂಡು ಗಿಡ ನೆಡಲು ಅವಕಾಶ ಮಾಡ ಲಾಗಿತ್ತು. ವನ್ಯಪ್ರಾಣಿಗಳಿಂದ ತೊಂದರೆ ಯಾಗದಿರಲಿ ಎಂದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಪ್ರದೇಶ ನೀಡಲಾಗಿತ್ತು.
(ಮೊದಲ ಪುಟದಿಂದ) ವಾಹನ ನಿಲುಗಡೆ, ತಂಡಗಳ ನಿರ್ವಹಣೆ, ಮೊಬೈಲ್ ಸೇವೆ ಇಲ್ಲದ ಕಾರಣ ವಾಕೀಟಾಕಿ ಮೂಲಕ ತಂಡದ ನಾಯಕರುಗಳು ಅರಣ್ಯದಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನಿಭಾಯಿಸಿದರು. ತಿತಿಮತಿ ಅರಣ್ಯ ಕಚೇರಿ ಆವರಣದಲ್ಲಿ ನೋಂದಣಿಗೆ ಅವಕಾಶ ನೀಡಲಾಗಿತ್ತು. ನೋಂದಣಿ ಮಾಡಿಕೊಂಡ ತಂಡವನ್ನು ಗುರುತಿಸಿದ ಪ್ರದೇಶಗಳಲ್ಲಿ ಗಿಡ ನೆಡಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಗೊಂದಲವಿಲ್ಲದೆ ಮುನ್ನಡೆಯು ವಂತಾಯಿತು.
ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಮಿತಿ ಮುಖ್ಯಸ್ಥ ಅಳಮೇಂಗಡ ಡಾನ್ ರಾಜಪ್ಪ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಕಾವೇರಿಗೆ ಮೂಲವಾಗಿರುವ ಕೊಡಗಿನ ಪರಿಸರ ರಕ್ಷಣೆಗೆ ಇಷ್ಟೊಂದು ಕಾರ್ಯಕರ್ತರು ಕೈಜೋಡಿಸಿರುವದು ಮೆಚ್ಚುವಂತ ವಿಚಾರವಾಗಿದೆ. ಒಂದು ಸಂಸ್ಥೆಯಿಂದ ಈ ರೀತಿಯ ಅಭಿಯಾನ ಅಸಾಧ್ಯ. ಕಾವೇರಿ ತಟದಲ್ಲಿರುವವರಿಗೆ ಕುಡಿಯುವ ನೀರು ಸಂರಕ್ಷಣೆಗೆ ಗಿಡ ನೆಡುವ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿರುವದು ಕಾವೇರಿಯನ್ನು ಉಳಿಸುವ ಪ್ರಯತ್ನವಾಗಿದೆ ಎಂದರು.
ರೂಟ್ಸ್ ಆಫ್ ಕೊಡಗು ಅಭಿಯಾನ ಕಾರ್ಯಕರ್ತ ಉದಿಯಂಡ ರೋಶನ್ ಮಾತನಾಡಿ, ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಭಾನುವಾರವೂ ಕೂಡ ಮುಂದುವರಿಸುತ್ತೇವೆ. ಉದ್ದೇಶಿತ 60 ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಸಾಕಾರಗೊಳಿ ಸುತ್ತೇವೆ ಎಂದರು. ವೈದ್ಯ
ಡಾ. ಸುರೇಶ್ ಮಾತನಾಡಿದರು.