ಸೋಮವಾರಪೇಟೆ, ಜು.28: ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪದವಿ ಪೂರ್ವ ಕಾಲೇಜಿನಲ್ಲಿ, ಲಯನ್ಸ್ ಕ್ಲಬ್, ಕಾಲೇಜಿನ ಲಿಯೋ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ನಿವೃತ್ತ ಸೈನಿಕ ಕಿಬೆಟ್ಟ ಪೂವಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶ ಸೇವೆ ಮಾಡುವದು ಅಮೂಲ್ಯ ಕಾರ್ಯ. ನಾವು ದೇಶವನ್ನು ರಕ್ಷಣೆ ಮಾಡಿದರೆ ದೇಶವೂ ಸಹ ನಮ್ಮನ್ನು ರಕ್ಷಿಸುತ್ತದೆ ಎಂದರು.

ಕಾರ್ಗಿಲ್ ಯುದ್ದದಲ್ಲಿ ಭಾಗವಹಿ ಸಿದ್ದ ನಿವೃತ್ತ ಸೈನಿಕ ಮಹೇಶ್ ಎಂ.ಇ. ಮಾತನಾಡಿ, ಯುವ ಜನಾಂಗ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ಬಗ್ಗೆ ಚಿಂತನೆ ಹರಿಸಬೇಕು ಎಂದರಲ್ಲದೇ, ಕಾರ್ಗಿಲ್ ಯುದ್ಧ ಸಂದರ್ಭದ ಪರಿಸ್ಥಿತಿಗಳನ್ನು ವಿದ್ಯಾರ್ಥಿ ಗಳ ಮುಂದೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಸಂಚಾಲಕ ಕೆ.ಎಂ. ಜಗದೀಶ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ತೇಜಸ್ವಿ, ಖಜಾಂಚಿ ರಾಮಚಂದ್ರ, ಪದಾಧಿಕಾರಿಗಳಾದ ಯೋಗೇಶ್, ಮಹೇಶ್, ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಶರಣ್, ಲಿಯೋ ಕ್ಲಬ್ ಅಧ್ಯಕ್ಷ ಹೆಚ್.ಎಲ್. ಪೇಮ್, ಉನ್ಯಾಸಕರಾದ ಅರ್ಪಿತಾ, ಪ್ರತಾಪ್, ಉಪಸ್ಥಿತರಿದರು. ವಿದ್ಯಾರ್ಥಿನಿಯ ರಾದ ಸಿಂಚನ, ಮೌಲ್ಯ, ಭೂಮಿಕ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸೋಮವಾರ ಪೇಟೆ ಲಯನ್ಸ್ ಕ್ಲಬ್ ಮತ್ತು ಕಾಲೇಜಿನ ವತಿಯಿಂದ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.