ಸೋಮವಾರಪೇಟೆ,ಜು.27: ಸಮೀಪದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ 17 ವರ್ಷಗಳಿಂದ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಕುಂಜಿಲ-ಕಕ್ಕಬ್ಬೆ ಗ್ರಾ.ಪಂ.ಗೆ ದ್ವಿತೀಯ ದರ್ಜೆ ಲೆಕ್ಕಸಹಾಯಕರಾಗಿ ಮುಂಬಡ್ತಿ ಹೊಂದಿದ ಬಿ.ಎಸ್. ಮಂಜಪ್ಪ ಹಾಗೂ ಅಟೆಂಡರ್ ಆಗಿ ಇದೀಗ ನಿವೃತ್ತಿಯಾದ ಬಿ.ಬಿ. ತಮ್ಮಣ್ಣ ಅವರುಗಳನ್ನು ಗ್ರಾ.ಪಂ. ವತಿಯಿಂದ ಬೀಳ್ಕೊಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಆರ್. ಪವಿತ್ರ, ಉಪಾಧ್ಯಕ್ಷೆ ಬಿ.ಡಿ. ಕುಮಾರಿ, ಸದಸ್ಯರಾದ ಕೆ.ಎನ್. ಶಿವಣ್ಣ, ಎಸ್.ಕೆ. ಮಾಚಯ್ಯ, ಬಿ.ಎಲ್. ವಿಶಾಲಾಕ್ಷಿ, ಹೆಚ್.ಈ. ಸೀತಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು.ಎಂ. ತಮ್ಮಯ್ಯ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.