ಸಿದ್ದಾಪುರ, ಜು. 27: ಇತ್ತೀಚೆಗೆ ಗುಹ್ಯ ಗ್ರಾಮದಲ್ಲಿ ಹೆಚ್1ಎನ್1 ಸೋಂಕು ತಗುಲಿ ವ್ಯಕ್ತಿಯೊರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಮಂಜುನಾಥ್ ಆದೇಶದ ಮೇರೆಗೆ ವೀಡಿಯೋ ಪ್ರದರ್ಶಿಸಲಾಯಿತು.
ಸಾಂಕಾಮಿಕ ರೋಗಗಳಾದ ಹೆಚ್1ಎನ್1, ಡೆಂಗ್ಯೂ, ಚಿಕುಂಗುನ್ಯ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವ ಬಗ್ಗೆ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಮೇಲ್ವಿಚಾರಕ ದೇವರಾಜ್, ಕಾರ್ಯಕ್ರಮ ವ್ಯವಸ್ಥಾಪಕ ಜಗದೀಶ್, ಆರೋಗ್ಯ ನಿರೀಕ್ಷಕ ಸುದರ್ಶನ್ ಸ್ಥಳೀಯರಾದ ಮನೋಹರ್, ಪ್ರೇಮ್‍ರಾಜ್ ಸೇರಿದಂತೆ ಆಶಾ ಕಾರ್ಯಕರ್ತರು ಹಾಜರಿದ್ದರು.