ಸುಂಟಿಕೊಪ್ಪ, ಜು. 27: ವಿಶ್ವ ಹಿಂದೂ ಪರಿಷದ್ ಹಾಗೂ ಶ್ರೀ ಗೌರಿ-ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ ಬಿ.ಎಂ. ಸುರೇಶ್, ಪ್ರಧಾನ ಕಾರ್ಯದರ್ಶಿ ಯಾಗಿ ಸುರೇಶ್ ಗೋಪಿ ನೇಮಕಗೊಳಿಸಲಾಯಿತು.
ಇಲ್ಲಿನ ಸುಂಟಿಕೊಪ್ಪದ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಸಭೆ ಅಧ್ಯಕ್ಷ ಬಿ.ಎಂ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಬಿ.ಎಂ. ಸುರೇಶ್, ಉಪಾಧ್ಯಕ್ಷರಾಗಿ ಡಿ.ಎಂ. ಲಕ್ಷ್ಮಣ, ಎಸ್. ರವಿ, ಎಂ.ಆರ್. ಶಶಿಕುಮಾರ್, ಪಿ. ಲೋಕೇಶ್, ಡಿ.ಕೆ. ರಜಿನೀಶ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ, ಸಹ ಕಾರ್ಯದರ್ಶಿಯಾಗಿ ಬಿ.ವಿ. ತೇಜಸ್, ಎಸ್. ಪೃಥ್ವಿರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಕೆ. ಪ್ರಕಾಶ್, ಯು.ಎನ್. ರಮೇಶ್, ಸೂರ್ಯ, ಅರುಣ್ ಕುಮಾರ್, ಕೆ. ಮಧು, ಮಿಥುನ್, ಖಜಾಂಚಿಯಾಗಿ ಶೇಖರ್ ಅಣ್ಣು, ಕಾರ್ಯಕಾರಿ ಸಮಿತಿಗೆ 21 ಮಂದಿಯನ್ನು ನೇಮಕಗೊಳಿಸಲಾಯಿತು.