ಮಡಿಕೇರಿ, ಜು. 27: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಮಡಿಕೇರಿಯಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಡಾ. ಅಕ್ಷಯ್ ಕುದ್ಪಜೆ ನೇತೃತ್ವದಲ್ಲಿ ಆಯೋಜಿಸಿತ್ತು.
ಮಡಿಕೇರಿ ಇನ್ನರ್ ವೀಲ್ ಮತ್ತು ಅಮೃತ ಇ.ಎನ್.ಟಿ. ಕೇರ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಶಿಬಿರವನ್ನು ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್, ಕಾರ್ಯದರ್ಶಿ ಶಫಾಲಿ ರೈ, ಸದಸ್ಯೆಯರಾದ ಲತಾ ಸುಬ್ಬಯ್ಯ, ಆಗ್ನೇಸ್ ಮುತ್ತಣ್ಣ, ರಶ್ಮಿ ಪ್ರವೀಣ್ ನಿರ್ವಹಿಸಿದರು.