ನಾಪೆÇೀಕ್ಲು: ನಾಪೆÇೀಕ್ಲು ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ ಉದ್ಘಾಟಿಸಿದರು. 19-20ನೇ ಸಾಲಿನ ಶಾಲಾ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಧನಲಕ್ಷ್ಮಿ, ಉಪಾಧ್ಯಕ್ಷರಾಗಿ ಕಿಶೋರ್, ಕಾರ್ಯದರ್ಶಿಯಾಗಿ ಅಸ್ಮಿನಾ, ಸಹ ಕಾರ್ಯದರ್ಶಿಯಾಗಿ ಶಬೀರ್, ಖಜಾಂಚಿಯಾಗಿ ರಮ್ಯ ಆಯ್ಕೆಯಾದರು. ಇವರಿಗೆ ಕಾರ್ಯಕ್ರಮಕ್ಕೆ ಪದಗ್ರಹಣಾಧಿಕಾರಿಯಾಗಿ ಆಗಮಿಸಿದ ಡಿ.ಎಂ. ತಿಲಕ್ ಬ್ಯಾಡ್ಜ್ ನೀಡಿ ಕ್ಲಬ್‍ನ ದ್ಯೇಯೋದ್ಧೇಶಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್‍ನ ಕಾರ್ಯದರ್ಶಿ ಪ್ರಮೋದ್ ರೈ, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಪಿ. ಮದುಸೂದನ್, ಯುವ ಸೇವಾ ಘಟಕದ ನಿರ್ದೇಶಕ ಧನಂಜಯ, ಸಾಮಾಜಿಕ ಕಾರ್ಯಕ್ರಮಗಳ ನಿರ್ದೇಶಕ ಶ್ರೀಹರಿ, ಸದಸ್ಯರಾದ ಬಿ.ಕೆ. ಕಾರ್ಯಪ್ಪ, ಕೆ.ಜಿ. ಅಜಿತ್ ನಾಣಯ್ಯ, ಪದವಿ ಪೂರ್ವ ವಿಭಾಗದ ಉಪನ್ಯಾಸಕರು, ನಿರ್ಗಮಿತ ಅಧ್ಯಕ್ಷೆ ನೇಸರ, ವಿದ್ಯಾರ್ಥಿಗಳು ಇದ್ದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಜಗದೀಶ್ ಸ್ವಾಗತ, ವಿದ್ಯಾರ್ಥಿನಿ ಪನ್ನ ನಿರೂಪಿಸಿ, ಇಂಟರ್ಯಾಕ್ಟ್ ಕ್ಲಬ್ ಸಂಯೋಜಕಿ ಶಿಕ್ಷಕಿ ಉಷಾರಾಣಿ ಕ್ಲಬ್‍ನ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ ವಂದಿಸಿದರು.ಸೋಮವಾರಪೇಟೆ: ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಜೀವ ರಕ್ಷಾ ಯೋಜನೆಯಡಿ ಪ್ರಥಮ ಚಿಕಿತ್ಸಾ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಮಾಜಿ ಸಹಾಯಕ ರಾಜ್ಯಪಾಲ ಸದಾನಂದ, ನಿಕಟಪೂರ್ವ ಅಧ್ಯಕ್ಷ ಪಿ.ಕೆ. ರವಿ, ಹೆಚ್.ಸಿ. ನಾಗೇಶ್, ಮುಖ್ಯೋಪಾಧ್ಯಾಯಿನಿ ಅಣ್ಣಮ್ಮ ಇದ್ದರು.ಕುಶಾಲನಗರ: ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ತಾಲೂಕು ಆರೋಗ್ಯ ಇಲಾಖೆಗಳ ಕಚೇರಿಯ ವತಿಯಿಂದ ಡೆಂಗ್ಯೂ ವಿರೋಧಿ ಮಾಸಾಚರಣೆಯ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಚಾಲನೆ ನೀಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ ಜನರು ಪ್ರತಿನಿತ್ಯ ತಮ್ಮ ವಾಸಸ್ಥಳದ ಸುತ್ತಮುತ್ತಲ ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲಾ ಸೂಕ್ತ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ. ಆನಂದ್ ಮಾತನಾಡಿ, ಡೆಂಗ್ಯೂ ಹರಡದಂತೆ ಪ್ರತಿ ಬಡಾವಣೆಗಳಲ್ಲಿ ಜಾಗೃತಿ ವಹಿಸುವದರೊಂದಿಗೆ ಜನರಿಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕೆಂದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ. ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಫಾತಿಮಾ ಕಾನ್ವೆಂಟ್ ಪ್ರೌಢಶಾಲಾ ವಿಭಾಗ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮಡಿಕೇರಿ: ಮರಗೋಡಿನ ಭಾರತಿ ಸಂಯುಕ್ತಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್) ವತಿಯಿಂದ ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಲಾಯಿತು. ಬ್ಯಾಂಕ್‍ನ ಮರಗೋಡು ಶಾಖೆಯ ಸೀನಿಯರ್ ಮ್ಯಾನೇಜರ್ ವಿ ಪ್ರಕಾಶ್ ಶಾಲೆಯ 150 ವಿದ್ಯಾರ್ಥಿಗಳಿಗೆ ಸುಮಾರು ರೂ. 17000 ಮೌಲ್ಯದ ಊಟದ ತಟ್ಟೆಗಳನ್ನು ಮುಖ್ಯಶಿಕ್ಷಕ ಪಿ.ಎಸ್. ರವಿಕೃಷ್ಣ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್‍ನ ಸಿಬ್ಬಂದಿಗಳಾದ ಕೆ.ಕೆ. ರವಿ, ಬಿ. ಸಂತೋಷ್, ಸಿ.ವಿ.ಆರ್ ಪಣಿಕ್ಕರ್, ಬಿ.ಹೆಚ್. ನಾರಾಯಣ್ ಶಾಲಾ ಶಿಕ್ಷಕ ವರ್ಗದವರು ಹಾಜರಿದ್ದರು.