ನಾಪೋಕ್ಲು, ಜು.27: ಮೈಸೂರಿನಿಂದ ಕಾಂಞಗಾಡ್ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ಸೊಂದು ಇಲ್ಲಿಗೆ ಸಮೀಪದ ಎಮ್ಮೆಮಾಡು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿಗೆ ಸರಿಯಿತು. ಪ್ರಯಾಣಿಕರಿಗೆ ಯಾವದೇ ಸಮಸ್ಯೆಯಾಗಿಲ್ಲ. ಬಳಿಕ ಗ್ರಾಮಸ್ಥರ ನೆರವಿನಿಂದ ಬಸ್ಸನ್ನು ರಸ್ತೆಗೆ ತರಲು ಪ್ರಯತ್ನಿಸಿದರು ಯಾವದೇ ಫಲ ದೊರೆಯಲಿಲ್ಲ. ನಂತರÀ ಕ್ರೇನ್ ಮೂಲಕ ಎಳೆದು ರಸ್ತೆಗೆ ತರಲಾಯಿತು.
ಎಮ್ಮೆಮಾಡು ದರ್ಗಾಕ್ಕೆ ತೆರಳುವ ರಸ್ತೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ಆಗಾಗ್ಗೆ ಸಮಸ್ಯೆ ಉದ್ಭವಿಸುತ್ತಿದೆ. ರಸ್ತೆಯಲ್ಲಿ ಹೊಂಡ ಗಳಾಗಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಖಾಸಗಿ ಬಸ್ಸುಗಳು, ಶಾಲಾಕಾಲೇಜು ವಾಹನಗಳು ಸೇರಿದಂತೆ ಹಲವು ಬಸ್ಸುಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಅಂತರರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸು ಕೂಡ ಸಂಚರಿಸುತ್ತಿದ್ದು, ರಸ್ತೆ ದುಸ್ಥಿತಿಯಿಂದ ಹಾಗೂ ಕಿರಿದಾದ ರಸ್ತೆಯಿಂದಾಗಿ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯನ್ನು ದುರಸ್ತಿಪಡಿಸುವದಾಗಿ ಮಾಜಿ ಮುಖ್ಯ ಮಂತ್ರಿ ಭರವಸೆ ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ದರ್ಗಾಕ್ಕೆ ತೆರಳುವ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ದುಗ್ಗಳ