ಸುಂಟಿಕೊಪ್ಪ, ಜು. 27: ಇಲ್ಲಿನ ಉಲುಗುಲಿ ರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೆÉೀರಿಯಿಂದ ಸಂಚಾರಿ ಉದ್ಯೋಗ ನೊಂದಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್ ವಹಿಸಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳಾದ ಜಗನಾಥ್ ಮಾತನಾಡಿದರು.
ನಂತರ 17ರಿಂದ 18 ವಯಸ್ಸಿನ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಸುಮಾರು 40 ಉದ್ಯೋಗ ಚೀಟಿಯನ್ನು ವಿತರಿಸಿದರು. ಈ ಸಂದರ್ಭ ಉಪನ್ಯಾಸಕರುಗಳು ಹಾಜರಿದ್ದರು.