ಗೋಣಿಕೊಪ್ಪ ವರದಿ, ಜು. 26 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗುರುವಾರ ಕಿರುಗೂರು ಕುಟ್ಟಿಚಾತ ದೇವಸ್ಥಾನದಲ್ಲಿ ಕೋಲಾಟ್ ತಂಡಕ್ಕೆ ಪರಿಕರಗಳನ್ನು ವಿತರಿಸ ಲಾಯಿತು. ಕೊಡವ ಅಕಾಡಮಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ, ಸದಸ್ಯ ಟಿ. ಎಂ. ಮುದ್ದಯ್ಯ, ಕುಟ್ಟಿಚಾತ ದೇವಸ್ಥಾನದ ಅಧ್ಯಕ್ಷ ಕೆ. ಯಂ ರಾಜಪ್ಪ ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಸರಾ ಚಂಗಪ್ಪ ಪ್ರಮುಖರಾದ ನಂಜಪ್ಪ, ಪೂಣಚ್ಚ ಹಾಜರಿದ್ದರು.