ಶನಿವಾರಸಂತೆ, ಜು. 26: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೆಹಳ್ಳಿ ಗ್ರಾಮದ ನಿವಾಸಿಯೊಬ್ಬರ ಮನೆಯ ಹಿಂಬದಿಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು, ಬೆಡ್ ರೂಮಿನಲ್ಲಿದ್ದ ಗಾಡ್ರೇಜ್‍ನಲ್ಲಿಟ್ಟಿದ್ದ ರೂ.23,000 ಕಳವು ಮಾಡಿಕೊಂಡು ಹೋಗಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಎಡೆಹಳ್ಳಿ ಗ್ರಾಮದ ನಿವಾಸಿ ಸುಶೀಲಮ್ಮ ಬಸಪ್ಪ ಅವರು ತಾ. 23ರಂದು ಮುದ್ದನಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿದ್ದು, ಮರುದಿನ ವಾಪಾಸು ಬಂದು ಮನೆಯ ಬೀಗ ತೆಗೆದು ಒಳ ಹೋಗಿ ನೋಡಲಾಗಿ, ಬೆಡ್‍ರೂಮಿನಲ್ಲಿದ್ದ ಗಾಡ್ರೇಜ್ ಅನ್ನು ಯಾರೋ ಕಳ್ಳರು ಆಯುಧದಿಂದ ಮೀಟಿ ತೆರೆದು ಬೀರುವಿನಲ್ಲಿಟ್ಟಿದ್ದ 23,000 ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು, ಮನೆಯ ಹಿಂಬದಿಯಿಂದ ಹೊರಗೆ ಹೋಗುವಾಗ ಹೆಂಚನ್ನು ಅದೇ ರೀತಿ ಮುಚ್ಚಿ ಹೋಗಿರುವದು ಪತ್ತೆಯಾಗಿದೆ. ಈ ಬಗ್ಗೆ ಸುಶೀಲಮ್ಮ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪೊಲೀಸರು ಕಲಂ 454, 457, 380 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿದ್ದು, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.