ಸಿದ್ದಾಪುರ, ಜು. 26 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಂಗಳವಾರ ನೆಲ್ಯಹುದಿಕೇರಿ ಗ್ರಾಮದ ಅಂಗವಿಕಲರಿಗೆ ಪರಿಕರ ಗಳನ್ನು ವಿತರಣೆ ಮಾಡಲಾಯಿತು. ನೆಲ್ಯಹುದಿಕೇರಿ ಗ್ರಾ.ಪಂ. ಸಭಾಂಗಣ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ 9ಜನ ಫಲಾನುಭವಿಗಳಿಗೆ ಗಾಲಿ ಕುರ್ಚಿ, ಊರುಗೋಲು ಮತ್ತು ವಾಟರ್ ಬೆಡ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಘದ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಹಾಗೂ ತಾಪಂ ಸದಸ್ಯೆ ಸುಹಾದಾ ಅಶ್ರಫ್ ಮಾತನಾಡಿದರು. ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಮುಹಮ್ಮದ್, ಧರ್ಮಸ್ಥಳ ಸಂಘದ ಹರೀಶ್, ವಾರಿಜಾ ಭರತ್, ಪ್ರಮೀಳಾ, ಭವ್ಯಾ, ಬ್ರಿಜೆಟ್ ಲಿಲ್ಲಿ ಮತ್ತು ಇತರರು ಇದ್ದರು.