ಮಡಿಕೇರಿ, ಜು. 25: ಗೋಣಿಕೊಪ್ಪದ ಇಂಡಿಯನ್ ಸೀನಿಯರ್ ಚೇಂಬರ್ ಹಾಗೂ ಅರಣ್ಯ ಇಲಾಖೆ, ಆನೆ ಚೌಕೂರು ವಲಯ ಇವರ ಜಂಟಿ ಆಶ್ರಯದಲ್ಲಿ ಅಳ್ಳೂರು ಗೇಟ್ ನಿಂದ ಮತ್ತಿಗೋಡು ಆನೆ ಶಿಬಿರದವರೆಗೆ ಕಾಲ್ನಡಿಗೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿರ್ಬಂಧ ಹಾಗೂ ಕಸವನ್ನು ಅರಣ್ಯದಂಚಿನಲ್ಲಿ ಎಸೆಯದಂತೆ ವಾಹನ ಸವಾರರಲ್ಲಿ ಮನವಿ ಮಾಡಿಕೊಳ್ಳಲಾಯಿತು. ಇದೇ ಸಂದರ್ಭ ರಸ್ತೆಯ ಇಬ್ಬದಿ ಇದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸದಸ್ಯರಿಂದಲೆ ಸ್ವಚ್ಛಗೊಳಿಸಲಾಯಿತು ಅರಣ್ಯದಲ್ಲಿ ಪ್ಲಾಸ್ಟಿಕ್ ಕಸ ಹಾಕುವದರಿಂದ ಕಾಡು ಪ್ರಾಣಿಗಳ ಹಾಗೂ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಿತ್ತಿ ಪತ್ರ ಹಂಚಲಾಯಿತು. ಈ ಸಂದರ್ಭ ಕಾರ್ಯಕ್ರಮ ಸಂಯೋಜಕ ಸಣ್ಣುವಂಡ ತಿಮ್ಮಯ್ಯ ಮಾತನಾಡಿ, ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ವಿವರಿಸಿದರು.ಸೀನಿಯರ್ ಚೇಂಬರ್ ಅದ್ಯಕ್ಷ ಮನ್ನಕಮನೆ ಬಾಲಕೃಷ್ಣ, ಕಾರ್ಯದರ್ಶಿ ಮೂಕಳೆರ ದಿಲ್ಲ್, ಸೇರಿದಂತೆ ಘಟಕದ ಎಲ್ಲ ಸದಸ್ಯರು ಹಾಜರಿದ್ದರು. ಅರಣ್ಯ ಅಧಿಕಾರಿ ಗಣಪತಿ, ವನ ಪಾಲಕರು, ಪೋಲಿಸ್ ಸಿಬ್ಬಂದಿ ಯಶವಂತ ಸಹಕಾರ ನೀಡಿದರು.