ಚೆಟ್ಟಳ್ಳಿ, ಜು. 22: ಪುಂಡಾಟಿಕೆ ತೋರುತ್ತಿದ್ದ ಪುಂಡಾನೆಯೊಂದನ್ನು ಚೆಟ್ಟಳ್ಳಿಯ ಪೊನ್ನತ್ ಮೊಟ್ಟೆಯ ಸಮೀಪದ ತೋಟದಿಂದ ಹಿಡಿದು ದುಬಾರೆಯ ಸಾಕಾನೆ ಶಿಬಿರ ಟ್ರೋಲ್‍ನಲ್ಲಿ ಬಂಧಿಸಿಡಲಾಗಿದೆ. ದುಬಾರೆಯ ಸಾಕಾನೆ ಶಿಬಿರದಲ್ಲಿ ಬಂಧಿಸಿದ ಇಲಾಖೆಯ ಅಧಿಕಾರಿಗಳ ಸಮ್ಮುಖ ನಾಮಕರಣ ಮಾಡಲಾಗುತ್ತದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಈ ಬಂಧಿತ ಪುಂಡಾನೆಗೂ ಬಂಧಮುಕ್ತ ಗೊಳ್ಳುವದರೊಂದಿಗೆ ನಾಮಕರಣ ಆಗಲಿದೆ.