ಚೆಟ್ಟಳ್ಳಿ, ಜು. 22: ಚೆಟ್ಟಳ್ಳಿ ವಿನಾಯಕ ರಿಕ್ರಿಯೇಶನ್ ಕ್ಲಬ್‍ನ ಒಂಬತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷರಾಗಿ ದಂಬೆಕೋಡಿ ಹರೀಶ್, ಉಪಾಧ್ಯಕ್ಷರಾಗಿ ಮುಳ್ಳಂಡ ಪುಸ್ಯ ರಂಜನ್, ಕಾರ್ಯದರ್ಶಿಯಾಗಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿಯಾಗಿ ಚೋಳಪಂಡ ವಿಜಯ, ಖಜಾಂಚಿಯಾಗಿ ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಪರ್ಲಕೋಟಿ ತಿರುಪತಿ, ಕಾನೂನು ಸಲಹೆಗಾರರಾಗಿ ಮುಳ್ಳಂಡ ರತ್ತು ಚಂಗಪ್ಪ, ಆಂತರಿಕ ಲೆಕ್ಕಪರಿಶೋಧಕರಾಗಿ ಪೇರಿಯನ ಘನಶ್ಯಾಂ, ಸಾಂಸ್ಕøತಿಕ ನಿರ್ದೇಶಕರಾಗಿ ಬಲ್ಲಾರಂಡ ನಾಣಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷ ರತ್ತು ಚಂಗಪ್ಪ ಅಧಿಕಾರ ಹಸ್ತಾಂತರಿಸಿದರು. ಕಕ್ಕಡ 18ರ ಸಂತೋಷ ಕೂಟವನ್ನು ಆಗಸ್ಟ್ 5 ರಂದು ಸಂಘದ ಸಭಾಂಗಣದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.