ವೀರಾಜಪೇಟೆ, ಜು. 22: ಮಿಜೋರಾಂ ರಾಜ್ಯದ ನಿವಾಸಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ನಗರದಲ್ಲಿ ಸಂಭವಿಸಿದೆ.

ಪಾಲಂಗಾಲದ ಕ್ಲಬ್ ಮಹೇಂದ್ರ ರೆಸಾರ್ಟ್‍ನಲ್ಲಿ ಸ್ಪಾಮೆಲ್ವಿಚಾರಕರಾಗಿ ಕಾರ್ಯನಿರ್ವಹಿಸುತಿದ್ದ ಮಿಜೋರಾಂ ರಾಜ್ಯದ ನಿವಾಸಿ ವನ್‍ಲಾಲ್ ರಿನ್ಮೋಮ (29) ನೇಣಿಗೆ ಶರಣಾದ ವ್ಯಕ್ತಿ. ಮೃತ ವ್ಯಕ್ತಿ ಮತ್ತು ತಂಗಿ ವನ್‍ಲಾಲ್ ತಿಹಲಾಲಣಿ (21) ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದರು ಎನ್ನಲಾಗಿದೆ. ವೀರಾಜಪೇಟೆ ನಗರದ ಗೋಣಿಕೊಪ್ಪಲು ರಸ್ತೆಯಲ್ಲಿರುವ ಕೂರ್ಗ್ ಕಾಂಟಿನೆಂಟಲ್ ಇನ್ ಹೊಟೇಲ್‍ನಲ್ಲಿ ಕ್ಲಬ್ ಮಹಿಂದ್ರ ಸಂಸ್ಥೆಯು ತಮ್ಮ ಸಿಬ್ಬಂದಿಗಳಿಗೆ ಬಾಡಿಗೆ ಕೊಠಡಿಗಳನ್ನು ನೀಡಿದೆ. ಮೃತನು ಮತ್ತು ಸ್ನೇಹಿತ ಕೆ.ಸಿ. ರೀಮಾಲಾಲ್ ಹಾಕ್ಕ ವಾಸವಾಗಿದ್ದರು.ನಿನ್ನೆ ರಾತ್ರಿ ತಮ್ಮ ಕರ್ತವ್ಯ ಮುಗಿಸಿ ಹಿಂದಿರುಗಿದ್ದರು. ದೂರವಾಣಿ ಸಂಪರ್ಕದಲ್ಲಿ ತಲ್ಲಿನಾಗಿದ್ದ ಮೃತನು ಕೆಲವು ಸಮಯದವರೆಗೆ ಖಿನ್ನತೆಗೊಳಾಗಿದ್ದ ನಂತರದಲ್ಲಿ ಶೌಚ ಮಾಡಲೆಂದು ಶೌಚಗೃಹಕ್ಕೆ ಹೋಗಿದ್ದಾನೆ. ಕೆಲವು ಸಮಯದವರೆಗೆ ಬಾರದೆಯಿದ್ದು ಸಂಶಯದಿಂದ ಸ್ನೇಹಿತ ಬಾಗಿಲನ್ನು ತೆರೆಯಲು ಮುಂದಾಗಿದ್ದಾನೆ. ಅದರೆ ಯಾವದೇ ರೀತಿಯ ಪ್ರತಿಕ್ರಿಯೆ ಬಾರದ್ದನ್ನು ಗಮನಿಸಿ ಬಾಗಿಲನ್ನು ಮುರಿದಿದ್ದಾನೆ. ಮೃತನು ಸ್ನಾನದ ನೀರು ಬರುವ ಪೈಪ್‍ಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದುದ್ದು ಗೋಚರಿಸಿದೆ. ಅತ್ಮಹತ್ಯೆಗೆ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಂಗಿ ವನ್‍ಲಾಲ್ ತಿಹಲಾಲಣಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಪೊಲೀಸು ಠಾಣೆಯಲ್ಲಿ ಅಸ್ವಾಬಾವಿಕ ಮರಣ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.