ಮಡಿಕೇರಿ, ಜು. 22: ಮೈಸೂರಿನ ನಿಶಾಂತ್ಸ್ ವೈಲ್ಡ್ ಬೀಟ್ಸ್ ಡಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ವೈಭವ ಹಾಗೂ ಕ್ರಿಯೇಟ್‍ಮೆಂಟ್ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸ ಲಾಗಿದ್ದ ‘ಡ್ಯಾನ್ಸ್ ಮ್ಯಾರಥಾನ್-ಸೀಸನ್ 9’ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮೈಸೂರು ಜಗನ್‍ಮೋಹನ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಮೈಸೂರು, ಕೊಡಗು, ಹಾಸನ, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳು ಭಾಗವಹಿಸಿದ್ದವು. ಈ ಪೈಕಿ 35ಕ್ಕೂ ಅಧಿಕ ಮಂದಿ ಕಲಾವಿದರಿದ್ದ ಕಿಂಗ್ಸ್ ಆಫ್ ಕೂಗ್ರ್Àನ ತಂಡ ಪ್ರದರ್ಶಿಸಿದ ನೃತ್ಯಕ್ಕೆ ಪ್ರಥಮ ಬಹುಮಾನ ಲಭ್ಯವಾಗಿದೆ. ಕಿಂಗ್ಸ್ ಆಫ್ ಕೂರ್ಗ್‍ನ ತರಬೇತುದಾರ ಮಹೇಶ್‍ಗೆ ಉತ್ತಮ ನೃತ್ಯ ಸಂಯೋಜಕ ಪ್ರಶಸ್ತಿ ಲಭ್ಯವಾಗಿದೆ.