ಶ್ರೀಮಂಗಲ, ಜು. 22 : ಕೊಡಗಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಕ್ರಿಶ್ಚಿಯನ್ ಮಿಶನರಿಗಳಿಂದ ಬೈಬಲ್ ಸೇರಿದಂತೆ ಕ್ರಿಶ್ಚಿಯನ್ ಧರ್ಮ ಸಾರುವ ಪುಸ್ತಕಗಳನ್ನು ಹಂಚಿಕೆ ಮಾಡುವ ಮೂಲಕ ಪರೋಕ್ಷವಾಗಿ ಮತಾಂತರಕ್ಕೆ ಪ್ರಯತ್ನಿಸುತ್ತಿರುವ ಜಾಲದ ವಿರುದ್ಧ ಜಿಲ್ಲಾಡಳಿತ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಪಡೆದು ಶ್ರೀಮಂಗಲ ಬಂದ್ ನಡೆಸುವದಾಗಿ ಶ್ರೀಮಂಗಲ ವ್ಯಾಪ್ತಿಯ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖಂಡರು ಎಚ್ಚರಿಸಿದ್ದಾರೆ.
ಈ ಬಗ್ಗೆ ತುರ್ತು ಸಭೆ ನಡೆಸಿದ ಸಂಘದ ಪ್ರಮುಖರಾದ ಬೊಳ್ಳಜಿರ ಆಶೋಕ್, ಚೋನೀರ ಕಾಳಯ್ಯ, ಐಪುಮಾಡ ಸಂಜು ಅವರುಗಳು ಇಷ್ಟರವರೆಗೆ ಜಿಲ್ಲೆಯ ಕಾರ್ಮಿಕರ ಕಾಲೋನಿಗಳಲ್ಲಿ ಮತಾಂತರಕ್ಕೆ ಪ್ರಯತ್ನ ನಡೆಸಲಾಗುತ್ತಿದ್ದು, ಇದೀಗ ಶಿಕ್ಷಣ ಸಂಸ್ಥೆಗಳಿಗೂ ಮತಾಂತರದ ಪಿಡುಗು ವ್ಯಾಪಿಸುತ್ತಿದೆ ಎಂದು ಕಿಡಿ ಕಾರಿದರು.
ಕ್ರಿಶ್ಚಿಯನ್ ಧರ್ಮ ಸಾರುವ ಹಾಗೂ ಆ ಧರ್ಮದತ್ತ ಆಕರ್ಷಣೆÉಗೊಳಿಸುವಂತಹ ಸಾಹಿತ್ಯದ ಪುಸ್ತಕಗಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರ ವಿರುದ್ಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಇಂತಹ ಮತಾಂತರ ಚಟುವಟಿಕೆಗಳಿಗೆ ತಡೆ ಹಾಕಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡು ಪುಸ್ತಕಗಳನ್ನು ಕಳುಹಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ಸರ್ಕಾರಿ ಶಾಲೆಗಳಿಗೆ ಕನ್ನಡ ಭಾಷೆಯಲ್ಲಿ “ಸತ್ಯಮೇವ ಜಯತೆ”, “ಯೋಹನನು ಬರೆದ ಸುವರ್ತೆ” ಮತ್ತು ಕೊಡವ ಭಾಷೆಯಲ್ಲಿ “ದೇವಡ ಪುದಿಯ ಒಪ್ಪಂದ” ಎಂಬ ಶಿರ್ಷಿಕೆಯಡಿ ಪುಸ್ತಕ ಹಂಚಿಕೆ ಆಗುತ್ತಿದ್ದು ಕೆಲವು ಪುಸ್ತಕಗಳು ಅಂಚೆ ಮೂಲಕ ರವಾನೆಯಾಗುತ್ತಿದೆ. ಶ್ರೀಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಈ ಪುಸ್ತಕಗಳು ಬಂದಿರುವದನ್ನು ಸಭೆಯಲ್ಲಿ ಅವರು ಪ್ರದರ್ಶಿಸಿದರು.
ಜಿಲ್ಲಾಡಳಿತ ಈ ¨ಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು; ಇಲ್ಲದಿದ್ದರೆ ಇದರ ವಿರುದ್ಧ ಶ್ರೀಮಂಗಲ ಪಟ್ಟಣವನ್ನು ಬಂದ್ ಮಾಡಿ ಹೋರಾಟ ಆರಂಭಿಸುವದಾಗಿ ಎಚ್ಚರಿಸಿದರು. ಈ ಸಂದರ್ಭ ಕಾಕಮಾಡ ಅಜಿತ್ ಹಾಜರಿದ್ದರು.