ಸುಂಟಿಕೊಪ್ಪ: ಬ್ಯಾಂಕ್ ಆಫ್ ಬರೋಡದ ಗದ್ದೆಹಳ್ಳ ಶಾಖೆ ವತಿಯಿಂದ ಬ್ಯಾಂಕಿನ ಸಂಸ್ಥಾಪಕರ ದಿನವನ್ನು ಆಚರಿಸಲಾಯಿತು. ದಿನದ ಅಂಗವಾಗಿ ಬ್ಯಾಂಕಿನ ಗ್ರಾಹಕರಿಗೆ ವ್ಯವಸ್ಥಾಪಕ ಪ್ರತಾಪ್‍ಕುಮಾರ್ ಸಿಹಿ ವಿತರಿಸಿ ಮಾತನಾಡಿ, ಬ್ಯಾಂಕ್ ಆಫ್ ಬರೋಡ ದೇಶ-ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರಿಗೆÀ ಉತ್ತಮ ಸೇವೆಯನ್ನು ಒದಗಿಸುತ್ತಿದೆ ಎಂದರು. ದಿನದ ಅಂಗವಾಗಿ ಬ್ಯಾಂಕಿನ ವತಿಯಿಂದ ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ ಶಾಲೆಗೆ ಉಚಿತವಾಗಿ ಕುಡಿಯುವ ನೀರಿನ ಫಿಲ್ಟರ್ ವಿತರಿಸಿದರು. ಈ ಸಂದರ್ಭ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಅಧ್ಯಕ್ಷ ಎ. ಲೋಕೇಶ್‍ಕುಮಾರ್, ಕಾಫಿ ಬೆಳೆಗಾರ ಸಿ.ಎ. ಕರುಂಬಯ್ಯ, ಬ್ಯಾಂಕಿನ ಅಧಿಕಾರಿಗಳಾದ ರಾಜೇಂದ್ರಕುಮಾರ್, ಜಯ ಜಿ. ಹೆಗ್ಡೆ, ಸತೀಶ್, ಗಂಗಾಧರ್, ರವಿ ಡ್ರೋನಮ್ ರಾಜು, ಸಂತೋಷ್, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.ಕುಶಾಲನಗರ: ಬ್ಯಾಂಕ್ ಆಫ್ ಬರೋಡ ತನ್ನ 112ನೇ ವರ್ಷದ ಸೇವೆ ಪೂರೈಸಿದ ಹಿನ್ನೆಲೆ ಕುಶಾಲನಗರದ ಶಾಖೆ ಆಶ್ರಯದಲ್ಲಿ ಬಸವನಹಳ್ಳಿ ಸರಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತಿತರ ಸಾಮಗ್ರಿಗಳನ್ನು ವಿತರಿಸಲಾಯಿತು. ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಖೆಯ ವ್ಯವಸ್ಥಾಪಕ ಎಸ್.ಆರ್.ಕೆ. ರೆಡ್ಡಿ, ಸಹಾಯಕ ವ್ಯವಸ್ಥಾಪಕ ಎಂ.ಎಸ್. ಸುವರ್ಣ ಮತ್ತು ಶಾಲೆಯ ಶಿಕ್ಷಕ ವೃಂದದವರು ಇದ್ದರು.ಸೋಮವಾರಪೇಟೆ: ವಿಜಯಾ ಬ್ಯಾಂಕ್‍ಗೆ ವಿಲೀನಗೊಂಡಿರುವ ಬ್ಯಾಂಕ್ ಆಫ್ ಬರೋಡದ 112ನೇ ಸಂಸ್ಥಾಪನಾ ದಿನದ ಅಂಗವಾಗಿ ಇಲ್ಲಿನ ಬೇಳೂರು ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್‍ಗಳನ್ನು ವಿತರಿಸಲಾಯಿತು.

ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಲಭಿಸುತ್ತಿದ್ದು, ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕ ಅಶೋಕ್ ವಿಮನ್ ಕಿವಿಮಾತು ಹೇಳಿದರು. ಈ ಸಂದರ್ಭ ಬ್ಯಾಂಕ್ ಸಿಬ್ಬಂದಿಗಳಾದ ಶಶಾಂಕ್, ವೆಂಕಟೇಶ್, ಪಿಗ್ಮಿ ಸಂಗ್ರಾಹಕ ಮೃತ್ಯುಂಜಯ, ಮುಖ್ಯೋಪಾಧ್ಯಾಯ ಚನ್ನವೀರಶೆಟ್ಟಿ ಅವರುಗಳು ಉಪಸ್ಥಿತರಿದ್ದರು.