ಗೋಣಿಕೊಪ್ಪ ವರದಿ, ಜು. 23: ಬೆಳಗಾವಿ ನಗರದ ಗಾಂಧಿ ಭವನದಲ್ಲಿ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದಲ್ಲಿ ಕೊಡಗು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಪಾಲ್ಗೊಂಡರು.

ಕೊಡಗು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮನು ಸೋಮಯ್ಯ ನೇತೃತ್ವದಲ್ಲಿ ಸುಮಾರು 70 ರೈತರು ಜಿಲ್ಲೆಯಿಂದ ಪಾಲ್ಗೊಂಡು ನವಲಗುಂದ, ಅಳಕವಾಡಿ, ನರಗುಂದ, ಚಿಕ್ಕನರ ಗುಂದ ಗ್ರಾಮಗಳಲ್ಲಿನ ಹುತಾತ್ಮ ರೈತರ ಸಮಾದಿಗೆ ಗೌರವ ಸಲ್ಲಿಸಿದರು. ರೈತಪರ ನಿರ್ಣಯ ಗಳಿಗೆ ಕೊಡಗಿನ ರೈತರು ಒಕ್ಕೊರ ಲಿನಿಂದ ಸಮ್ಮತಿ ಸೂಚಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರಾದ ಸುಭಾಶ್, ಟಿ. ಕೆ. ರಾಜಾ, ಅಜ್ಜಮಾಡ ಚೆಂಗಪ್ಪ, ಬಾಚಮಾಡ ಭವಿಕುಮಾರ್, ಬೊಟ್ಟಂಗಡ ಮಹೇಶ್, ನೂರೇರ ಉತ್ತಯ್ಯ, ಮಂಜು, ಎಂ. ಬಿ. ಹರೀಶ್, ತಮ್ಮಯ್ಯ ಇದ್ದರು.-ಸುದ್ದಿಪುತ್ರ