ಸುಂಟಿಕೊಪ್ಪ, ಜು. 23: ಇಲ್ಲಿನ ವಿಕಾಶ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮಕ್ಕೆ ಮಡಿಕೇರಿ ಇನ್ನರ್‍ವೀಲ್ ಕ್ಲಬ್ ಸಂಘದ ವತಿಯಿಂದ ಆಶ್ರಮದಲ್ಲಿ ಆಶ್ರಯ ಪಡೆದ 18 ನಿರಾಶ್ರಿತರಿಗೆ ಮಳೆಗಾಲದಲ್ಲಿ ಬೆಚ್ಚಗಿರಲು ಕಂಬಳಿಗಳನ್ನು ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭ ಮಾತನಾಡಿದ ಸಂಘದ ಆಧ್ಯಕ್ಷೆ ನಿಶಾಮೋಹನ್ ಈ ಆಶ್ರಮವು ಸರಕಾರದಿಂದ ಯಾವದೇ ಸಹಕಾರ ಇಲ್ಲದೆ ಸಾರ್ವಜನಿಕರ, ದಾನಿಗಳ ಸಹಕಾರದಿಂದ ನಿರಾಶ್ರಿತರಿಗೆ ಆಶ್ರಯ ನೀಡಿ ಮಾನವಿಯತೆ ಮರೆದಿರುವದು ಶ್ಲಾಘನೀಯ. ಈ ಆಶ್ರಮಕ್ಕೆ ಮುಂದೆಯೂ ನಮ್ಮ ಸಂಘದಿಂದ ಹೆಚ್ಚಿನ ಸಹಾಯ ನೀಡಲಾಗುವದು ಎಂದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಸಫಾಲಿ ರೈ, ಖಜಾಂಚಿ ನಮಿತ ರೈ, ಸಂಘದ ಪಧಾಧಿಕಾರಿಗಳು ವಿಕಾಸ್ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಮಮತಕಾಂತಿ ಆಶ್ರಮದ ನಿರಾಶ್ರಿತರು ಹಾಜರಿದ್ದರು.