ಮಡಿಕೇರಿ, ಜು.21: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮುತ್ತಾರುಮುಡಿ ಗ್ರಾಮದಲ್ಲಿ ‘ಅರೆಬಾಸೆÉ ಸಂಸ್ಕøತಿ ಜನಪದ ಹಬ್ಬ’ ಕಾರ್ಯಕ್ರಮ ಅಧ್ಯಕ್ಷ ಜಯರಾಂ ನೇತೃತ್ವದಲ್ಲಿ ನಡೆಯಿತು.
ಮುತ್ತಾರುಮುಡಿ ಗ್ರಾಮಸ್ಥರು, ಭಗವತಿ ಯುವಕ ಸಂಘ, ಭಗವತಿ ಮಹಿಳಾ ಮಂಡಳಿ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಕುರಿತ ಉಪನ್ಯಾಸ, ಸಾಧಕರಿಗೆ ಸನ್ಮಾನ, ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೋಡಿ ನೀಲಮ್ಮ (ನಾಟಿವೈದ್ಯ-ಜನಪದ ಸೇವೆ), ಬೈಲೇರ ಮೋಟಯ್ಯ (ಅರೆಭಾಷೆ ಸಂಸ್ಕøತಿ ಸೇವೆ), ಪಾರೆಮಜಲು ಕೇಶವಯ್ಯ (ಕ್ರೀಡೆ-ಕೃಷಿ), ಬಿಳಿಯಾರ ದೇವಯ್ಯ (ಜನಪದ-ಸಂಸ್ಕøತಿ ಸೇವೆ), ಪಾರೆಮಜಲು ದೇವಮ್ಮ ಅಪ್ಪಯ್ಯ (ಸಾಂಸ್ಕøತಿಕ ಸೇವೆ) ತೆಕ್ಕಡೆ ಬಸಪ್ಪ (ನಿವೃತ್ತ ಹಿರಿಯ ಯೋಧ), ಪಾರೆಮಜಲು ಡಾಲಿ (ನಿವೃತ್ತ ಹಿರಿಯ ಯೋಧ) ಮೇರ್ಕಜೆ ಉಮೇಶ್ (ಕೃಷಿ-ಜನಪದಕಲೆ-ನಾಟಿ ವೈದ್ಯ ಸೇವೆ) ತೆಕ್ಕಡೆ ಕುಮಾರಸ್ವಾಮಿ (ಸಾಹಿತ್ಯ-ಕಲೆ ಸೇವೆ) ಹಾಗೂ ಪಾರೆಮಜಲು ಕುಸುಮ ಕಾರ್ಯಪ್ಪ (ಕ್ರೀಡೆ-ಕಲಾ ಸೇವೆ) ಅವರುಗಳು ಸನ್ಮಾನಕ್ಕೆ ಭಾಜನರಾದರು.