ಮಡಿಕೇರಿ, ಜು. 21: ಹಾರಂಗಿ ಜಲಾಶಯದಿಂದ ತಾ. 21ರಿಂದ ಆಗಸ್ಟ್ 1ರವರೆಗೆ ಹಾರಂಗಿ ಎಡದಂಡೆ ಮತ್ತು ಬಲದಂಡೆ ನಾಲೆಯಿಂದ 12 ದಿನ ನೀರು ಸರಬರಾಜು ಮಾಡಲಾಗುವದು. ನಾಲೆಗಳಲ್ಲಿ ಹರಿಸುವ ನೀರನ್ನು ಕೆರೆ - ಕಟ್ಟೆಗಳನ್ನು ತುಂಬಿಸಲು ಮತ್ತು ಜನ - ಜಾನುವಾರುಗಳಿಗೆ ಕುಡಿಯುವ ಸಲುವಾಗಿ ಮಾತ್ರ ಉಪಯೋಗಿಸಲು ಸೂಚಿಸಲಾಗಿದೆ. ಒಂದುವೇಳೆ ನಾಲೆಗಳಡಿಯಲ್ಲಿ ಬರುವ ರೈತರು ಹಾರಂಗಿ ನಾಲೆಗಳ ನೀರನ್ನು ಅವಲಂಭಿಸಿ ಬೆಳೆ ಬೆಳೆದು ಹಾನಿಯಾದಲ್ಲಿ ಅದಕ್ಕೆ ಸರ್ಕಾರ ಜವಾಬ್ದಾರಿಯಲ್ಲ ಎಂದು ಹಾರಂಗಿ ಯೋಜನಾ ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿ ಯರ್ ಡಿ. ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.