ಶನಿವಾರಸಂತೆ, ಜು. 21: ಸಮೀಪದ ಕೊಡ್ಲಿಪೇಟೆಯ ಶ್ರೀರುಕ್ಮಿಣಿ - ಪಾಂಡುರಂಗ ದೇವಾಲಯದ ಕಲಶ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ ಬಳಿಕ 48ನೇ ದಿನದ ಮಂಡಲ ಪೂಜೋತ್ಸವ ಕಾರ್ಯಕ್ರಮ ತಾ. 23 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8.30ಕ್ಕೆ ಶ್ರೀದೇವರಿಗೆ ಅಭಿಷೇಕ, ಅಲಂಕಾರ, 10ಕ್ಕೆ ಗಣಪತಿ ಹೋಮ, ಲಕ್ಷ್ಮಿನಾರಾಯಣ ಹೃದಯ ಹೋಮ ನಡೆಯಲಿದೆ. 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.