ಮಡಿಕೇರಿ, ಜು. 21: ಮಡಿಕೇರಿ ವಿಭಾಗ ಸೋಮವಾರಪೇಟೆ ವಲಯ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ ಅವರನ್ನು ಆನೆಕಾಡು ಡಿಪೋವಿನಲ್ಲಿ ಖಾಲಿ ಹುದ್ದೆಗೆ, ಮಾಲ್ದಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗೂಳಿ ಅವರನ್ನು ಪೊನ್ನಂಪೇಟೆ ವಲಯದ ಖಾಲಿ ಹುದ್ದೆಗೆ, ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ ಮಹಮದ್ ಅಲಿಫ್ ಪತನ ಮಲಿಕ್ ಅವರನ್ನು ಬೆಳಗಾವಿಯ ಗುಜನಾಳದ ನಂದಿ ಶಾಖೆಗೆ ವರ್ಗಾವಣೆ ಮಾಡಲಾಗಿದೆ.
ಮಡಿಕೇರಿ ವನ್ಯಜೀವಿ ವಿಭಾಗದ ಅರಣ್ಯ ರಕ್ಷಕ ರಾಘವೇಂದ್ರ ಅವರನ್ನು ಶಿವಮೊಗ್ಗ ವೃತ್ತದ ಶಂಕರ ವಲಯಕ್ಕೆ, ಸೋಮವಾರಪೇಟೆ ವಲಯದ ಅರಣ್ಯ ರಕ್ಷಕ ಪ್ರಮೋದ್ ಅವರನ್ನು ಚಿತ್ರದುರ್ಗ ವಿಭಾಗದ ಚಳ್ಳಕೆರೆ ವಲಯಕ್ಕೆ, ತಿತಿಮತಿ ವಲಯದ ಲಿಂಗಾಪುರದ ಅರಣ್ಯ ರಕ್ಷಕ ಮಲ್ಲಪ್ಪ ಬಸಪ್ಪ ಪೂಜೇರಿಯವರನ್ನು ಬಾಗಲಕೋಟೆ ಸಾಮಾಜಿಕ ವಿಭಾಗಕ್ಕೆ, ಬ್ರಹ್ಮಗಿರಿ ವನ್ಯಜೀವಿ ವಲಯದ ಅರಣ್ಯ ರಕ್ಷಕ ಸಂತೋಷ ಹಟ್ಟಿಯವರನ್ನು ಆಲಮಟ್ಟಿ ಅರಣ್ಯ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಸಂಪಾಜೆ ವಲಯದ ಅರಣ್ಯ ವೀಕ್ಷಕಿ ಲಲಿತ ಅವರನ್ನು ಮೈಸೂರು ನಗರ ಹಸಿರೀಕರಣ ವಲಯಕ್ಕೆ, ಮುಂಡ್ರೋಟು ವಲಯದ ಅರಣ್ಯ ವೀಕ್ಷಕ ಶಿವಕುಮಾರ್ ಅವರನ್ನು ಹಾಸನ ವಿಭಾಗದ ಅರಕಲಗೂಡು ವಲಯಕ್ಕೆ, ಭಾಗಮಂಡಲ ವಲಯದ ಅರಣ್ಯ ವೀಕ್ಷಕ ಮನು ಅವರನ್ನು ಹಾಸನ ಪ್ರಾದೇಶಿಕ ವಲಯಕ್ಕೆ, ಕುಶಾಲನಗರ ಪ್ರಾದೇಶಿಕ ವಲಯದ ಅರಣ್ಯ ವೀಕ್ಷಕ ಸಂತೋಷ ಹಾವನೂರು ಅವರನ್ನು ಬಳ್ಳಾರಿ ವೃತ್ತದ ಹೂವಿನ ಹಡಗಲಿ ವಲಯಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.