ಮಡಿಕೇರಿ, ಜು. 21: ಜಿಲ್ಲಾ ಆಸ್ಪತ್ರೆಯಲ್ಲಿ ರೊಟಾ ವೈರಸ್ ಲಸಿಕೆಯನ್ನು ಅತಿಸಾರ ಬೇಧಿ ಮಕ್ಕಳಿಗೆ 6 ವಾರ ತುಂಬಿದ ನಂತರ, 10 ವಾರ ಮತ್ತು 14ನೇ ವಾರದಲ್ಲಿ ನೀಡುವ ಕುರಿತು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಚಾಲನೆ ನೀಡಿದರು. ಇದುವರೆಗೆ ಬಿಬಿ ಪೋಲಿಯೋ, ಹೆಪಟೈಟಿಸ್-ಬಿ, ಧನುರ್ವಾಯು, ನಾಯಿಕೆಮ್ಮು, ಗಂಟಲು ಮಾರಿ, ಹಿಪೋಪಿಲಸ್ ಇನ್ ಪ್ಲೋಯೆಂಜಾ-ಬಿ, ನ್ಯುಮೋನಿಯಾ, ದಡಾರ ರುಬೆಲ್ಲಾ, ಮೆದುಳು ಜ್ವರ ತಡೆಗಟ್ಟಲು ಲಸಿಕೆಗಳನ್ನು ನೀಡುತ್ತಿದ್ದು, ಹೊಸದಾಗಿ ಅತಿಸಾರ ಭೇದಿ ನಿಯಂತ್ರಣ ಹಾಗೂ ರಕ್ಷಣೆಗಾಗಿ ರೊಟಾವೈರಸ್ ಲಸಿಕೆ ಪ್ರಾರಂಭಿಸಲಾಗಿದೆ ಎಂದರು.

ಈ ಕುರಿತು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಎಸ್. ಗೋಪಿನಾಥ್, ವಿಭಾಗೀಯ ಸರ್ವೇಕ್ಷಣಾಧಿಕಾರಿ ಡಾ. ಸುದೀರ್‍ನಾಯಕ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ಗೌಡಳ್ಳಿ ವೈದ್ಯಾಧಿಕಾರಿ ಡಾ. ಇಂಧೂಧರ್, ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.

ಮಕ್ಕಳ ತಜ್ಞರಾದ ಡಾ. ಕೃಷ್ಣಾನಂದ, ಡಾ. ರಾಮಚಂದ್ರ ಕಾಮತ್, ಕಾರ್ಯಕ್ರಮ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಆಸ್ಪತ್ರೆಯ ತಜ್ಞರು, ತಾಲೂಕು ಆಸ್ಪತ್ರೆಯ ತಜ್ಞರು ಭಾಗವಹಿಸಿದ್ದರು.