ಮಡಿಕೇರಿ, ಜು. 21: ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಕಳೆದ 41 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೆಚ್.ಬಿ. ಲಕ್ಷ್ಮಿ ಅವರಿಗೆ “ಬೆಸ್ಟ್ ವರ್ಕರ್” ಪ್ರಶಸ್ತಿ ಲಭಿಸಿದೆ.

ಕೇರಳದ ಕ್ಯಾಲಿಕಟ್‍ನಲ್ಲಿರುವ ಮುಖ್ಯ ಕಚೇರಿಯಲ್ಲಿ ನಡೆದ ಐಐಎಸ್‍ಆರ್ ಸ್ಥಾಪನಾ ದಿನಾಚರಣೆಯಂದು ಹೊಸದಿಲ್ಲಿಯ ಕೃಷಿ ವಿಜ್ಞಾನ ನೇಮಕಾತಿ ಸಮಿತಿಯ ಸದಸ್ಯ ಪಿ.ಕೆ. ಚಕ್ರವರ್ತಿ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭ ಮಲೆಯಾಳಂ ಯೂನಿವರ್ಸಿಟಿಯ ಅಸ್ಸೋಸಿಯೆಟ್ ಪೆÇ್ರ. ರಾಧಾಕೃಷ್ಣನ್, ಐಐಎಸ್‍ಆರ್‍ನ ಪ್ರಮುಖರಾದ ಸಂತೋಷ್ ಸ್ಟೀಫನ್, ರಮಾ, ಚಂದ್ರಬಾಬು ಮತ್ತಿತರ ಪ್ರಮುಖರು ಹಾಜರಿದ್ದರು.