ಮಡಿಕೇರಿ, ಜು.20: ಕರ್ನಾಟಕ ಅರೆಭಾಸೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ.21 ರಂದು (ಇಂದು) ಬೆಳಿಗ್ಗೆ 9.30 ಗಂಟೆಗೆ ಮುತ್ತಾರುಮುಡಿ ಶಾಲಾ ಆಟದ ಬಾಣೆಯಲ್ಲಿ ಗ್ರಾಮಸ್ಥರು, ಭಗವತಿ ಯುವಕ ಸಂಘ, ಮುತ್ತಾರುಮುಡಿ ಭಗವತಿ ಮಹಿಳಾ ಮಂಡಳಿ ಇವರ ಸಹಕಾರದಲ್ಲಿ “ಅರೆಬಾಸೆ ಸಂಸ್ಕøತಿ ಜನಪದ ಹಬ್ಬ” ನಡೆಯಲಿದೆ.
ಕಾಂತೂರು ಮೂರ್ನಾಡು ಗ್ರಾ.ಪಂ. ಅಧ್ಯಕ್ಷ ಕಲ್ಲುಮುಟ್ಲು ಜಮುನ ಸೋಮಯ್ಯ, ಊರಿನ ಹಿರಿಯರಾದ ಪಾರೆಮಜಲು ಗಂಗಮ್ಮ ದೇವಯ್ಯ, ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ, ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಜಿ.ಪಂ.ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಸೇರಿದಂತೆ ಗ್ರಾ.ಪಂ. ಸದಸ್ಯರು ಇತರರು ಪಾಲ್ಗೊಳ್ಳಲಿದ್ದಾರೆ.