ಕುಶಾಲನಗರ, ಜು. 18: ಕುಶಾಲನಗರ ಕನ್ನಿಕಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಕುಶಾಲನಗರ ತಾಲೂಕು ಘಟಕದ ನೂತನ ಸಮಿತಿಯ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು. ಸಾಹಿತಿ ಭಾರಧ್ವಜ್ ಕೆ. ಆನಂದತೀರ್ಥ ಉದ್ಘಾಟಿಸಿದರು.

ಕುಶಾಲನಗರದಲ್ಲಿ ನೆನೆಗುದಿಗೆ ಬಿದ್ದಿರುವ ಕನ್ನಡ ಭವನ ಕೂಡಲೆ ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಶ್ರಮಿಸಬೇಕಾಗಿದೆ ಎಂದರಲ್ಲದೆ ಮಾಜಿ ಮುಖ್ಯಮಂತ್ರಿ ದಿ.ಗುಂಡುರಾಯರ ಸ್ಮರಣೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನೂತನ ತಾಲೂಕು ಸಮಿತಿ ಅಧ್ಯಕ್ಷರಾಗಿ ಎಂ.ಡಿ. ರಂಗಸ್ವಾಮಿ, ಗೌರವ ಕಾರ್ಯದರ್ಶಿಯಾಗಿ ಎನ್.ಆರ್. ನಾಗೇಶ್, ಎ.ಎಸ್. ಹರೀಶ್, ಗೌರವ ಕೋಶಾಧ್ಯಕ್ಷರಾಗಿ ಬಿ.ಎ. ನಾಗೇಗೌಡ, ನಿರ್ದೇಶಕರು ಗಳಾಗಿ ಎಚ್.ಎನ್. ರಾಮಚಂದ್ರ, ಉ.ರಾ. ನಾಗೇಶ್, ಎಚ್.ಬಿ. ಚಂದ್ರಪ್ಪ, ಬಿ.ವಿ. ಸಾವಿತ್ರಿ, ಸುನಿಲ್ ಪೊನ್ನೇಟಿ, ಎಸ್.ಕೆ. ಮಾಲಾದೇವಿ, ವೈ.ಟಿ. ಪರಮೇಶ್, ಡಿ. ನರಸಿಂಹ, ಎಚ್.ಎಂ. ವೆಂಕಟೇಶ್, ವಹೀದ್ ಜಾನ್, ಅಂಚೆಮನೆ ಸುಧಿ ಅಧಿಕಾರ ವಹಿಸಿಕೊಂಡರು.

ಇದೇ ಸಂದರ್ಭ ನೂತನ ತಾಲೂಕು ರಚನೆಗೆ ಹೋರಾಟ ನಡೆಸಿದ ತಾಲೂಕು ಹೋರಾಟ ಸಮಿತಿಯ ಪ್ರಮುಖರಾದ ವಿ.ಪಿ. ಶಶಿಧರ್, ಆರ್.ಕೆ. ನಾಗೇಂದ್ರ ಬಾಬು, ಕೆ.ಎಸ್. ರಾಜಶೇಖರ್, ಎಂ.ಇ. ಮುಸ್ತಾಫ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್, ನಿವೃತ್ತ ಪ್ರಾಂಶುಪಾಲ ಎಚ್.ವಿ. ಶಿವಪ್ಪ, ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ಸಮಿತಿ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ನಿರ್ದೇಶಕರಾದ ಫಿಲಿಪ್ ವಾಸ್, ಕೆ.ಕೆ. ನಾಗರಾಜಶೆಟ್ಟಿ, ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್ ಮತ್ತಿತರರು ಇದ್ದರು.

ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಗಳಾಡಿದರು, ಉ.ರಾ. ನಾಗೇಶ್ ಸ್ವಾಗತಿಸಿದರು, ಮಾಲಾದೇವಿ ಕಾರ್ಯಕ್ರಮ ನಿರೂಪಿಸಿದರು.