ಕುಶಾಲನಗರ, ಜು. 18: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ವ್ಯಕ್ತಿಯೊಬ್ಬ ಚಿಕಿತ್ಸೆ ಪಡೆಯಲಾಗದೆ ಸಂಕಟಪಡುತ್ತಿರುವ ಪ್ರಕರಣವೊಂದು ಕುಶಾಲನಗರದಲ್ಲಿ ಬೆಳಕಿಗೆ ಬಂದಿದೆ. ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿ ವಿಲ್ಸನ್ ಎಂಬವರಿಗೆ ಮೇ ತಿಂಗಳಲ್ಲಿ ಕುಶಾಲನಗರ ಸಮೀಪದ ಕೊಪ್ಪದಲ್ಲಿ ರಸ್ತೆ ಅಪಘಾತವಾಗಿದ್ದು, ಕಾಲಿನ ಮಂಡಿಯ ಚಿಪ್ಪು ಪುಡಿಯಾಗುವದರೊಂದಿಗೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಯಾವದೇ ರೀತಿಯ ಫಲಶೃತಿ ಕಂಡುಬಂದಿಲ್ಲ.
ಇದೀಗ ಮನೆಯಲ್ಲೇ ಇರುವ ಕೂಲಿ ಕಾರ್ಮಿಕರಾದ ವಿಲ್ಸನ್ ಅವರಿಗೆ ಪತ್ನಿ ಹೊರತಾಗಿ ಸಹಾಯಕ್ಕೆ ಯಾರೂ ಇರುವದಿಲ್ಲ ಎಂದು ಸ್ಥಳೀಯ ಸಮಾಜ ಸೇವಕ ಸಿದ್ಧರಾಜು ಪತ್ರಿಕೆಗೆ ಮಾಹಿತಿ ಒದಗಿಸಿದ್ದಾರೆ. ಹೆಚ್ಚಿನ ಚಿಕಿತ್ಸೆ ಪಡೆಯಲು ಹಣದ ಅವಶ್ಯಕತೆಯಿದ್ದು ಕುಟುಂಬಕ್ಕೆ ಜೀವನ ಸಾಗಿಸುವದು ಕೂಡ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಈ ಬಡ ಕುಟುಂಬಕ್ಕೆ ಸಹಾಯಹಸ್ತ ಚಾಚುವವರು ಗಾಯಾಳು ಪತ್ನಿ ಜಯಲಕ್ಷ್ಮಿ ಅವರ ಮೊಬೈಲ್ ಸಂಖ್ಯೆ 9008859661 ಗೆ ಸಂಪರ್ಕಿಸುವದರೊಂದಿಗೆ ಅವರ ಕುಶಾಲನಗರ ಕೆನರಾ ಬ್ಯಾಂಕ್ನ ಖಾತೆ ಸಂಖ್ಯೆ 0689101020405 ಐಎಫ್ಎಸ್ಸಿ ನಂ ಸಿಎನ್ಆರ್ಬಿ 0000689ಗೆ ಧನ ಸಹಾಯ ನೀಡುವ ಮೂಲಕ ಸಹಕರಿಸುವಂತೆ ಪತ್ರಿಕೆ ಮೂಲಕ ಕೋರಿದ್ದಾರೆ.