ಕುಶಾಲನಗರ, ಜು 18: ಗುರು ಪೂರ್ಣಿಮ ಅಂಗವಾಗಿ ಕುಶಾಲನಗರ ಶ್ರೀ ಶಿರಡಿ ಸಾಯಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 6 ಗಂಟೆಯಿಂದ ಕಾಕಡ ಆರತಿ, ಅಭಿಷೇಕ ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, 12 ಗಂಟೆಗೆ ಆರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.

ದಾನಿಗಳು ದೇವರಿಗೆ ಬೆಳ್ಳಿ ಕಿರೀಟ, ಪಾದುಕೆಗಳು, ದೇವಾಲ ಯಕ್ಕೆ ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಿದರು. ಕುಶಾಲನಗರ ದೇವಾಲಯ ಒಕ್ಕೂಟ ಸಮಿತಿಯ ಸದಸ್ಯರು ದೇವರಿಗೆ ಹೂವು, ಹಣ್ಣು ಅರ್ಪಿಸುವ ಮೂಲಕ ಸಾಮೂಹಿಕ ಪೂಜೆ ನೆರವೇರಿಸಿ ಅಭಿಷೇಕ ನೆರವೇರಿಸಿದರು.

ದೇವಾಲಯ ಅರ್ಚಕ ಪಂಡಿತ್ ನವೀನ್ ಶುಕ್ಲ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು.

ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ಧರೇಶ್ ಬಾಬು, ಉಪಾಧ್ಯಕ್ಷ ಶ್ರೀಪತಿ, ಕಾರ್ಯದರ್ಶಿ ನಂಜುಂಡಸ್ವಾಮಿ, ಖಜಾಂಚಿ ಮುನಿಸ್ವಾಮಿ, ನಿರ್ದೇಶಕರಾದ ಓಬುಳ ರೆಡ್ಡಿ, ರವಿಕುಮಾರ್, ಅಮೃತ್‍ರಾಜ್ ಮತ್ತಿತರರು ಇದ್ದರು.