ಸಿದ್ದಾಪುರ, ಜು. 18: ಕನ್ನಡ ಸಾಹಿತ್ಯ ಪರಿಷತ್ ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷರಾಗಿ ಪಿ.ವಿ. ಜಾನ್ಸನ್ ಹಾಗೂ ಗೌರವ ಕಾರ್ಯದರ್ಶಿಯಾಗಿ ಹೆಚ್.ಬಿ. ರಮೇಶ್ ಆಯ್ಕೆಯಾಗಿದ್ದಾರೆ.
ಸಿದ್ದಾಪುರದ ಗುಹ್ಯ ಅಗಸ್ಥೇಶ್ವರ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಮ್ಮತ್ತಿ ಕಸಾಪ ಹೋಬಳಿ ಘಟಕವು ಯಾವದೇ ಕಾರ್ಯಕ್ರಮಗಳನ್ನು ಮಾಡದೇ ನಿಷ್ಕ್ರಿಯವಾಗಿದ್ದ ಹಿನ್ನೆಲೆ ಘಟಕದ ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯ ಆಯ್ಕೆ ಮಾಡಲಾಯಿತು.
ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ ಎಂ.ಹೆಚ್. ಮೂಸ, ನಿರ್ದೇಶಕರಾಗಿ ಬಿನೋಯ್ ಹಾಗೂ ಹಿಂದಿನ ಅಧ್ಯಕ್ಷರಾಗಿದ್ದ ಎಂ.ಎಸ್. ವೆಂಕಟೇಶ್ ಅವರನ್ನು ಜಿಲ್ಲಾ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಈ ಸಂದÀರ್ಭ ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಮಧೋಶ್ ಪೂವಯ್ಯ, ಕಾರ್ಯದರ್ಶಿ ಆರ್. ಸುಬ್ರಮಣಿ ಸೇರಿದಂತೆ ಹೋಬಳಿ ಕಸಾಪ ಸದಸ್ಯರುಗಳು ಇದ್ದರು.