ಗೋಣಿಕೊಪ್ಪಲು, ಜು. 15: ಗೋಣಿಕೊಪ್ಪ ರೋಟರಿ, ಪ್ರಾಥಮಿಕ ಶಾಲಾ ಹಳೆಯ ವಿದ್ಯಾರ್ಥಿ ಸಂಘ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ವನಮಹೋತ್ಸವ ಜರುಗಿತು.
ರೋಟರಿ ಸಂಸ್ಥೆ ಅಧ್ಯಕ್ಷ ಕಡೇಮಾಡ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಇಂಗ್ಲೀಷ್ ಕಲಿಕೆಯ ಅನುಕೂಲಕ್ಕಾಗಿ ಬೆಂಗಳೂರಿನ ಒರೆಕಲ್ ಸಂಸ್ಥೆಯ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ 100 ಪುಸ್ತಕಗಳನ್ನು ರೋಟೇರಿಯನ್ ಕುಂಞಂಗಡ ಅರುಣ್ ಹಸ್ತಾಂತರಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್ ಸವಲತ್ತುಗಳ ಪ್ರಯೋಜನ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು ಎಂದರು. ರೋಟೇರಿಯನ್ ಡಾ. ಚಂದ್ರಶೇಖರ್ ಮಾತನಾಡಿ, ಸರಳವಾಗಿ ವಿದ್ಯಾರ್ಥಿಗಳು ಇಂಗ್ಲೀಷ್ ಕಲಿಯಲು ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದರು. ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ‘ಕಾಡಿನೊಳಗೊಂದು ಜೀವ’ ಪುಸ್ತಕದ ವಿವರಗಳನ್ನು ತಿಳಿಸಿದರು.
ದಾನಿಗಳಾದ ಎಂ.ಜಿ. ಮೋಹನ್ ಹಾಗೂ ರೋಟೇರಿಯನ್ ಪ್ರಮೋದ್ ಕಾಮತ್, ಎಂ.ಎಂ. ಗಣಪತಿ, ಅಜ್ಜಿಕುಟ್ಟಿರ ಸಜನ್ ಚಂಗಪ್ಪ, ಎಂ.ಜಿ. ಕಾಂತರಾಜ್, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾದ ಗಣೇಶ್ ರೈ, ಕೇಚಮಾಡ ಹರೀಶ್, ಮುಖ್ಯೋಪಾಧ್ಯಾಯಿನಿ ಶಶಿಕಲಾ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಾಂತಿ, ದೈಹಿಕ ಶಿಕ್ಷಕ ರಮಾನಂದ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಎಂ.ಸಿ. ಇಂದಿರಾ ಸ್ವಾಗತಿಸಿ, ಕಲಾ ಶಿಕ್ಷಕ ಸತೀಶ್ ವಂದಿಸಿದರು.