(ನಿನ್ನೆಯ ಸಂಚಿಕೆಯಿಂದ)
ಈ ವಿಧಾನವು ಗಣಿತದ ಜ್ಞಾನ ಹೆಚ್ಚಿಸುತ್ತದೆ ಮತ್ತು ತಿಳುವಳಿಕೆಯನ್ನು ಪುಷ್ಠೀಕರಿಸುತ್ತದೆ, ಅಲ್ಲದೆ ಗಣಿತ ಶಾಸ್ತ್ರದ ಎಲ್ಲಾ ವಿವಿಧ ಶಾಖೆಗಳನ್ನು ನಿಖರತೆಯಿಂದ ಸುಲಭವಾಗಿ ಕಲಿಯಲು ಸಹಕರಿಸುತ್ತದೆ ಹಾಗೂ ಈ ವಿಭಾಗಗಳ ನಿರಂತರ ಹೊಂದಿಕೆಯನ್ನು ಸರಳವಾಗಿ ಅರ್ಥೈಸುತ್ತದೆ. ಸೂತ್ರಗಳನ್ನು ಬಳಸುವಾಗ ವಿದ್ಯಾರ್ಥಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸೂತ್ರಗಳನ್ನು ಉಪಯೋಗಿಸುವ ಹಾಗೂ ಸೂತ್ರಗಳ ಗುಂಪುಗಳನ್ನು ರಚಿಸಿ ತಮ್ಮದೇ ಆದ ಪರಿಹಾರ ವಿಧಾನದಲ್ಲಿ ಗಣಿತವನ್ನು ಮಾಡುವ ಅವಕಾಶವನ್ನು ಕಲ್ಪಿಸುವ ಮೂಲಕ ಮಕ್ಕಳ ಸೃಜನಶೀಲತಯನ್ನು ಉತ್ತೇಜಿಸುತ್ತದೆ. ಉತ್ತಮ ಸಾಮಥ್ರ್ಯವುಳ್ಳ ಮಕ್ಕಳಿಗೆ ಸೂತ್ರಗಳ ಆಯ್ಕೆಯ ಪ್ರಯೋಗಗಳ ಅವಕಾಶವನ್ನು ನೀಡುತ್ತಾ ಸಾಧಾರಣ ಸಮರ್ಥತೆಯ ಮಕ್ಕಳಿಗೆ ಸುಲಭ ಸರಳ ವಿಧಾನಗಳನ್ನು ಅಳವಸಿಕೊಂಡು, ಗಣಿತವನ್ನು ಪ್ರೀತಿಸುವ ಮನೋಭಾವವನ್ನು ಸೃಷ್ಟಿಸುತ್ತದೆ. ಇದರಿಂದ ಎಲ್ಲಾ ಸಾವiಥ್ರ್ಯದ ವ್ಯಾಪ್ತಿಯ ಮಕ್ಕಳಿಗೆ ಪರಿಣಾಮಕಾರಿಯಾಗಿ ತೋರುತ್ತದೆ. ವೇದ ಗಣಿತದ ಅತೀ ಸು¯ಭದ ವಿಧಾನಗಳನ್ನು ಬಳಸುವದರಿಂದ ವಿದ್ಯಾರ್ಥಿಗಳು ವiನಸ್ಸಿನಲ್ಲಿಯೇ ಲೆಕ್ಕಾಚಾರವನ್ನು ಮಾಡಲಾರಂಭಿಸುವದಲ್ಲದೆ, ಮಾನಸಿಕ ಚುರುಕುತನವನ್ನು ನೈಸರ್ಗಿಕವಾಗಿ ವೃದ್ಧಿಸಲು ಕಾರಣವಾಗುತ್ತದೆ. ಜೊತೆಯಲ್ಲಿ ಗಣಿತ ಸಂಬಂಧಿತ ವಿಷಯ ಹಾಗೂ ಇತರ ವಿಷಯಗಳನ್ನು ಮಕ್ಕಳ ಚುರುಕುತನವನ್ನು ಹೆಚ್ಚಿಸಿ ಮಕ್ಕಳ ಸಂಪೂರ್ಣ ಅಭಿವೃದ್ಧಿಗೆ ಬಾಜನವಾಗುತ್ತದೆ. ವಿದ್ಯಾರ್ಥಿಗಳು ನೇರವಾಗಿ, ಸರಳವಾಗಿ ಗಣಿತಶಾಸ್ತ್ರದ ವಿಭಾಗಗಳ ಆಂತರಿಕ ಸಂಬಂಧಗಳು, ಅವುಗಳ ರಚನೆ, ಹಾಗೂ ಅವುಗಳ ಉಪಯುಕ್ತತೆಯನ್ನು ತಿಳಿದುಕೊಂಡು ಅತೀ ಕಠಿಣ ಸಮಸ್ಯೆಗಳು ಹಾಗೂ ಬೃಹತ್ ಮೊತ್ತದ ಲೆಕ್ಕಗಳನ್ನೂ ತಕ್ಷಣವೇ ಪರಿಹರಿಸಲು ಅನುವಾಗುತ್ತದೆ. ಇದೆಲ್ಲದುದರಿಂದಾಗಿ ವಿದ್ಯಾರ್ಥಿಗಳಲ್ಲಿ ಗಣಿತದ ಭಯವನ್ನು ಹೋಗಲಾಡಿಸಿ, ಕಬ್ಬಿಣದ ಕಡಲೆಯಂತಿರುವದನ್ನು ಸುಲಿತವಾಗಿ ಸುಲಭದಲಿ ಪರಿಹರಿಸಿ ಗಣಿತದ ಸಂತೋಷವನ್ನು ಅನುಭವಿಸಲು ಅವಕಾಶ ನೀಡುವದು. ಗಣಿತವು ಒಂದು ಕಲೆ ಎಂಬ ಮಾತನ್ನು ನಿರೂಪಿಸುವಲ್ಲಿ ಈ ವೇದಗಣಿತವು ತನ್ನ ಸಾರ್ಥಕತೆಯನ್ನು ತೋರಿಸಿಹುದು. ಇದರಿಂದ ಮಕ್ಕಳು ಹೇಗೆ ಕಲೆಯನ್ನು ಪ್ರೀತಿಸುವರೋ ಅದೇ ರೀತಿಯಲ್ಲಿ ಗಣಿತವನ್ನು ಪ್ರೀತಿಸುವದು ಸರ್ವೇ ಸಾಧ್ಯ ಎಂಬುದನ್ನು ಅರಿಯಬಹುದಾಗಿದೆ. ವಿದ್ಯಾರ್ಥಿಗಳು ಯಾವದನ್ನೇ ಆಗಲಿ ತಮ್ಮ ಇಷ್ಟಕ್ಕನುಸಾರವಾಗಿ ಮನೋಪೂರ್ವಕವಾಗಿ ಒಪ್ಪಿ ಕಲಿಯುವದರಿಂದ ಅವರ ಕಲಿಕೆಯಲ್ಲಿ ಸ್ವಾಭಾವಿಕವಾದ ಹಾಗೂ ನೈಸರ್ಗಿಕವಾದ ಮಾನಸಿಕ ಬೆಳವಣಿಗೆಯನ್ನು ಹಾಗೂ ಮನೋಲೆಕ್ಕಚಾರದ ವ್ಯವಸ್ಥೆಯಲ್ಲಿ ವೃದ್ಧಿಯನ್ನು ಕಾಣಬಹುದು. ಅಲ್ಲದೆ ಮಕ್ಕಳಲ್ಲಿ ಆದರ್ಶ ತರ್ಕ ಚಿಂತನೆಗಳ ಬೆಳವಣಿಗೆಯನ್ನೂ ಕಾಣಬಹುದು. ಮನಸ್ಸಿನಲ್ಲೇ ಎಡದಿಂದ ಬಲಕ್ಕೆ ಸಂಖ್ಯೆಯನ್ನು ಗುರುತಿಸುವದು, ಅಭಿವ್ಯಕ್ತಿಸುವದನ್ನು ಹೆಚ್ಚಿಸುತ್ತದೆ. ಜೊತೆಯಲ್ಲಿ ಎಡದಿಂದ ಬಲಕ್ಕೆ ಗಣನೆಯನ್ನು ಮಾಡಲು ಅನುವಾಗುವದರಿಂದ ಕ್ಯಾಲ್ಕುಲೇಟರ್‍ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಚಿಂತನೆಯನ್ನು ಅಭಿವೃದ್ಧಿಪಡಿಸುತ್ತದೆ. ಇದೆಲ್ಲದರೊಂದಿಗೆ ಮಾಡಿದ ಲೆಕ್ಕಗಳನ್ನು, ಉತ್ತರಗಳ ನಿಖರತೆಯನ್ನು ಪರಿಶೀಲಿಸಲು ಸಹಾ ಅನುವಾಗುವದು ಈ ವೇದಗಣಿತ. ಮಾಡಿದ ಲೆಕ್ಕಗಳನ್ನು ಸ್ವತಂತ್ರವಾಗಿ, ತಕ್ಷಣದಲ್ಲಿಯೇ ಪರಿಶೀಲಿಸಿ ನಿಖರತೆಯನ್ನು ಕಂಡುಕೊಳ್ಳುವದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹಿಗ್ಗುತ್ತದೆ. ಹೀಗೆ ಹಲವಾರೂ ಪ್ರಯೋಜನಗಳುಳ್ಳ ನಮ್ಮ ಪ್ರಾಚೀನ ಪದ್ಧತಿಯ, ಗುರುಕುಲಗಳಲ್ಲಿ ಗುರುಗಳಿಂದ ಶಿಷ್ಯರಿಗೆ ನೇರವಾಗಿ ಮೌಖಿಕವಾಗಿ ಕೇಳಿಕೊಡಲಾಗುತ್ತಿದ್ದ ಒಂದು ವಿಧಾನವೊಂದು ತಡವಾಗಿಯಾದರೂ ಬೆಳಕಿಗೆ ಬಂದಿರುವದು ನಮ್ಮೆಲ್ಲರಿಗೂ ಸಂತೋಷದ ವಿಷಯ. ಆದರೆ ಇದರ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಅದರ ಸಾರ್ಥಕತೆಯನ್ನು ಹೊಂದಿದಲ್ಲಿ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರೆಯುವದು.
- ಯಾಲದಾಳು ಕುಮುದಾ ಜಯಪ್ರಶಾಂತ್, ಗಾಳಿಬೀಡು
(ಮುಂದುವರಿಯುವದು)