ಮಡಿಕೇರಿ, ಜು. 15: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕವನ್ನು ಉದ್ಘಾಟಿಸಲಾಯಿತು. ವಾರ್ಷಿಕ ಕಾಲೇಜು ಸಂಚಿಕೆ ‘ಸೀತಾ ಜ್ಯೋತಿ’ಯನ್ನು ಬಿಡುಗಡೆಗೊಳಿಸಲಾಯಿತು.
ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಅರ್ಜುನ್, ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸಿ. ಸುಬ್ರಮಣಿ, ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ನಿರ್ದೇಶಕ ನಂದೇಟಿರ ರಾಜ ಮಾದಪ್ಪ, ಪ್ರೊ. ಸುಶೀಲಾ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಎನ್.ಎಸ್.ಎಸ್. ಘಟಕಕ್ಕೆ ಅಧಿಕಾರಿಯಾಗಿ ಉಪನ್ಯಾಸಕ ಕಿಗ್ಗಾಲು ಹರೀಶ್ ನೇಮಕಗೊಂಡಿರುವದಾಗಿ ತಿಳಿಸಿದರು.
ನಿರೂಪಣೆಯನ್ನು ಉಪನ್ಯಾಸಕ ಹರ್ಷ ಮಂದಣ್ಣ ಮಾಡಿದರೆ, ಉಪನ್ಯಾಸಕಿ ವಿಲ್ಮ ಸ್ವಾಗತಿಸಿ, ಉಪನ್ಯಾಸಕ ಅನೂಪ್ ವಂದಿಸಿದರು.