ಗುಡ್ಡೆಹೊಸೂರು, ಜು. 14: ಇಲ್ಲಿನ ಶಾಲಾ ಮುಂಭಾಗದಲ್ಲಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ಮ್ಯಾಕ್ಸಿಕ್ಯಾಬ್ ಮತ್ತು ಕರೆಂಟ್ ಕಂಬ ಸಾಗಿಸುತ್ತಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಲಾರಿ ಹಿಂಬದಿಗೆ ವ್ಯಾನ್ ಡಿಕ್ಕಿಯಾದ ಸಂದರ್ಭ ಒಂದು ಕಂಬ ಸಂಪೂರ್ಣ ವ್ಯಾನ್‍ನೊಳಗೆ ನುಗ್ಗಿತ್ತು. ಅಲ್ಲದೆ 50 ಮೀಟರ್ ಅಂತರದವರಗೆ ಎರಡು ವಾಹನಗಳು

ಚಲಿಸಿವೆ. ಎರಡು ಆಸನಗಳ ನಡುವೆ ಕಂಬ ಒಳನುಗ್ಗಿದ್ದು, ಹಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವ್ಯಾನ್ (ಕೆ.ಎ. 55-5502) ಮತ್ತು ನೋಂದಣಿಯಾಗದ ಲಾರಿ ಎರಡು ಮೈಸೂರಿನಿಂದ ಮಡಿಕೇರಿಯತ್ತ ಚಲಿಸುತ್ತಿತ್ತು. ವ್ಯಾನ್ ಅತೀ ವೇಗದಲ್ಲಿ ಚಲಿಸಿರುವದೇ ಈ ಅವಘಡಕ್ಕೆ ಕಾರಣವಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.