ಗೋಣಿಕೊಪ್ಪಲು, ಜು.14: ಇಂಡಿಯನ್ ಸೀನಿಯರ್ ಚೇಂಬರ್‍ನ ಗೋಣಿಕೊಪ್ಪ ಘಟಕದ 6ನೇ ವರ್ಷದ ಪದಗ್ರಹಣ ಸಮಾರಂಭ ಗೋಣಿಕೊಪ್ಪÀ ದೊಡ್ಡಮಾಡ್ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷರಾಗಿ ಎರಡನೇ ಅವಧಿಗೆ ಮನ್ನಕ್ಕಮನೆ ಬಾಲಕೃಷ್ಣ ಅಧಿಕಾರ ಸ್ವೀಕರಿಸಿದರು.

ಕಾರ್ಯದರ್ಶಿಯಾಗಿ ಮೂಕಳೇರ ದಿಲ್, ಖಜಾಂಜಿಯಾಗಿ ಮಂಡೇಪಂಡ ಸಚಿನ್, ಉಪಾಧ್ಯಕ್ಷರಾಗಿ ಚೆರಿಯಂಡ ಶರತ್, ಮುರುವಂಡ ಉತ್ತಪ್ಪ, ಅಂತೋಣಿ ಜೋಸೆಫ್, ನಿರ್ದೆಶಕರಾಗಿ ಬಿ.ಎನ್. ಪ್ರಕಾಶ್, ಕೆ.ಜಿ.ಪ್ರವೀಣ್, ಟಿ.ಜೆ.ಅಂತೋಣಿ, ಡಿ.ಬಿ.ರವಿ, ವಿ.ವಿ.ಜಿತೇಂದ್ರ, ಡಾ.ಯತಿರಾಜ್, ಎಂ.ಎಸ್.ಕಾಶಿಯಪ್ಪ, ಶರತ್‍ಮ್ಯಾಥ್ಯೂ ಅಧಿಕಾರ ಸ್ವೀಕರಿಸಿದರು. ಚೇಂಬರ್‍ನ ರಾಷ್ಟ್ರೀಯ ಉಪಾಧ್ಯಕ್ಷ ಉದಯ ಬಾನು, ನಿರ್ಗಮಿತ ಅಧ್ಯಕ್ಷ ಪೊನ್ನೋಲತಂಡ ಕಿರಣ್, ಮಾಜಿ ಅಧ್ಯಕ್ಷ ಸಣ್ಣುವಂಡ ತಿಮ್ಮಯ್ಯ,ಸಂಜೀವ್ ನಾಯರ್ ಮುಂತಾದವರು ಮಾತನಾಡಿದರು. ಚೇಂಬರ್‍ಗೆ ನೂತನವಾಗಿ ನಾಗೇಂದ್ರ ರೈ ಸೇರ್ಪಡೆಗೊಂಡರು.