ಮಡಿಕೇರಿ, ಜು.14: ಕುಶಾಲನಗರದ ಶ್ರೀ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ತಾ. 16 ರಂದು ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.

ಬೆಳಗ್ಗೆ 6 ಗಂಟೆಗೆ ಕಾಕಡ ಆರತಿ, 6.30ಕ್ಕೆ ಭಕ್ತಾದಿಗಳಿಂದ ಕ್ಷೀರಾಭಿಷೇಕ, ಬೆಳಗ್ಗೆ 9 ಗಂಟೆಗೆ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಧ್ಯಾಹ್ನದ ಆರತಿ, ಸಂಜೆ 5.30ಕ್ಕೆ ಸಾಯಿಬಾಬಾ ಅಷ್ಠೋತ್ತರ, ಸಂಜೆ 6 ಗಂಟೆಗೆ ಭಜನೆ, 6.30ಕ್ಕೆ ಧೂಪದಾರತಿ, 6.45ಕ್ಕೆ ಪ್ರಸಾದ ವಿನಿಯೋಗ ಮತ್ತು ರಾತ್ರಿ 8 ಗಂಟೆಗೆ ಶೇಜಾರತಿ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಾಗಲಿದೆ.