ಸುಂಟಿಕೊಪ್ಪ, ಜು. 14: ರಾಷ್ಟ್ರೀಯ ಸ್ವಯಂಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ಭಾರತದಲ್ಲಿ ಗುರುವಿಗೆ ಶ್ರೇಷ್ಟ ಸ್ಥಾನವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದÀ ಸಹ ಸೇವಾ ಪ್ರಮುಖ್ ಶ್ರೀನಿವಾಸ್ ಉಬರಡ್ಕ ಹೇಳಿದರು.

ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಗುರು ಪೂಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಯಂ ಸೇವಕರು ಸಮರ್ಪಣಾ ಭಾವದಿಂದ ಸಂಘಟನೆಯಲ್ಲಿ ತೊಡಗಿರುವದರಿಂದ ಸಂಘ ಬೆಳೆಯಲು ಸಾಧ್ಯ.

ಭಾರತೀಯ ಪರಂಪರೆಯಲ್ಲಿ ತನ್ನದೇ ಪದ್ಧತಿಗಳನ್ನು ರೂಪಿಸಿಕೊಂಡು ಹಿಂದೂ ರಾಷ್ಟ್ರದ ಉಳಿವಿಗಾಗಿ ಸಂಘ ಬಲಿಷ್ಠವಾಗಿ ಬೆಳೆದಿದೆ ಎಂದರು. ಅಧ್ಯಕ್ಷತೆಯನ್ನು ವ್ಯಾಪಾರಿ ಜೈ ಗಣೇಶ್ ವಹಿಸಿ ಮಾತನಾಡಿದರು. ಸ್ವಯಂಸೇವಕ ರಾಖೇಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.