ಗೋಣಿಕೊಪ್ಪ ವರದಿ, ಜು. 14: ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಅಲ್ಲಿನ ಪ್ರೌಢಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಸದಸ್ಯರುಗಳು ಪಾಲ್ಗೊಂಡು ಆವರಣದಲ್ಲಿನ ಕುರುಚಲು ಕಾಡುಗಳನ್ನು ಕಳೆಕೊಚ್ಚುವ ಯಂತ್ರದ ಮೂಲಕ ಸ್ವಚ್ಛಗೊಳಿಸಲಾಯಿತು. ಬಳಗದ ಅಧ್ಯಕ್ಷ ಅಭಿಜಿತ್ ಮಾತನಾಡಿ, ಈಗಾಗಲೇ ಒಂದಷ್ಟು ಜನಪರ ಕಾರ್ಯಗಳನ್ನು ನಮ್ಮ ವ್ಯಾಪ್ತಿಯಲ್ಲಿ ಕಾರ್ಯಗತಗೊಳಿಸುತ್ತಿದ್ದೇವೆ. ಪೊಲೀಸ್ ಠಾಣೆ ಆವರಣ, ಪಟ್ಟಣ ವ್ಯಾಪ್ತಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಗಿದೆ ಎಂದರು.
ಈ ಸಂದರ್ಭ ಬಳಗದ ಉಪಾಧ್ಯಕ್ಷ ಆಸಿಫ್, ಜಂಟಿ ಕಾರ್ಯದರ್ಶಿ ಗ್ಲಾಡ್ವಿನ್ ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.