ಗುಡ್ಡೆಹೊಸೂರು, ಜು. 14: ಇಲ್ಲಿಗೆ ಸಮೀಪದ ರಸಲ್ಪುರ ಬಾಳುಗೋಡು ಗ್ರಾಮ ಮತ್ತು ಚಿಕ್ಕ ಬೆಟ್ಟಗೇರಿ, ದೊಡ್ಡಬೆಟ್ಟಗೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ರೈತರ ಕಾಪಿ üತೋಟ, ಜೋಳದ ಹೊಲ, ಶುಂಠಿ ಗದ್ದೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟಪಡಿಸುತ್ತಿವೆ. ಆನೆಗಳ ಹಿಂಡು ತೋಟದೊಳಗೆ ಬೀಡುಬಿಟ್ಟಿವೆ. ಅಲ್ಲಿನ ನಿವಾಸಿ ಗ್ರಾಮ ಪಂಚಾಯಿತಿ ಸದಸ್ಯೆ ಚಂಗಚಂಡ ಪಾರ್ವತಿ ಅವರ ಕಾಫಿ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ. ಆನೆ ಕಂದಕವನ್ನು ತೆಗೆಯುವಂತೆ ಆ ವಿಭಾಗದ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.